ಕಿವಿಗೆ ಹೂವು ಮೂಡಿದು ಬಂದ ಕಾಂಗ್ರೆಸ್ ಸದಸ್ಯರು.. ಬಜೆಟ್ ವೇಳೆ ಆಕ್ರೋಶ ವ್ಯಕ್ತಪಡಿಸಿದ ಕೈ ನಾಯಕರು - ವಿಪಕ್ಷ ನಾಯಕ ಸಿದ್ದರಾಮಯ್ಯ
ಬೆಂಗಳೂರು: ವಿಧಾನಪರಿಷತ್ನಲ್ಲಿ ಮುಖ್ಯಮಂತ್ರಿ ಪರವಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬಜೆಟ್ ಮಂಡಿಸಿದರು. ವಿಧಾನಸಭೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಬಜೆಟ್ ಮಂಡನೆ ಆರಂಭಿಸಿದ ಕೆಲ ಸಮಯದ ಬಳಿಕ ವಿಧಾನ ಪರಿಷತ್ನಲ್ಲಿಯೂ ಸಭಾ ನಾಯಕರು ಬಜೆಟ್ ಪ್ರತಿಯನ್ನು ಹೊಂದಿದ್ದ ಕೆಂಪು ಸೂಟ್ಕೇಸ್ ಸಮೇತ ಆಗಮಿಸಿದರು. ಆಡಳಿತ ಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ ಹಾಗೂ ಮತ್ತಿತರ ಸದಸ್ಯರು ಸಭಾ ನಾಯಕರನ್ನು ಬರಮಾಡಿಕೊಂಡರು.
ಪ್ರತಿಪಕ್ಷ ನಾಯಕ ವಿಕೆ ಹರಿಪ್ರಸಾದ್ ತಮ್ಮ ಎರಡು ಕಿವಿಗೂ ಹೂಗಳನ್ನ ಮುಡಿದು ಸಭೆಗೆ ಪ್ರವೇಶಿಸಿದರು. ಬಳಿಕ ಜೊತೆಯಲ್ಲೇ ಆಗಮಿಸಿದ ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಥೋಡ್ ತಮ್ಮ ಕೈಲಿ ಒಂದಿಷ್ಟು ಹೂಗಳನ್ನು ಹಿಡಿದು ಒಳ ಬಂದರು. ಬೆರಳೆಣಿಕೆ ಎಷ್ಟಿದ್ದ ಕಾಂಗ್ರೆಸ್ ಸದಸ್ಯರಿಗೆ ತಲಾ ಎರಡು ಹೂವುಗಳನ್ನ ನೀಡಿದ ಪ್ರಕಾಶ್ ರಾಥೋಡ್ ಕಿವಿಗೆ ಇಟ್ಟುಕೊಳ್ಳುವಂತೆ ಸೂಚಿಸಿದರು. ಇದೇ ಸಮಯಕ್ಕೆ ಸಭೆಗೆ ಆಗಮಿಸಿದ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೂ ಹೂ ಸ್ವೀಕರಿಸುವಂತೆ ಪ್ರಕಾಶ್ ರಾಥೋಡ್ ಹೇಳಿದರು. ಈ ಮಧ್ಯೆ ಸಭಾ ನಾಯಕರು ಸಿಎಂ ಪರವಾಗಿ ಬಜೆಟ್ ಮಂಡಿಸುವಂತೆ ಸೂಚಿಸಿದರು.
ಕಿವಿಗೆ ಹೂವಿಟ್ಟು ಬಂದ ಕಾಂಗ್ರೆಸ್ ಸದಸ್ಯರು ಕಳೆದ ವರ್ಷ ನೀಡಿದ ಭರವಸೆಯೇ ಈಡೇರಿಸಿಲ್ಲ. ಈಗ ಹೊಸ ಭರವಸೆ ನೀಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಭರವಸೆಯನ್ನು ನಂಬಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೊಂದೆಡೆ ಮುಖ್ಯಮಂತ್ರಿಗಳ ಪರವಾಗಿ ತಾವು ವಿಧಾನ ಪರಿಷತ್ನಲ್ಲಿ ಬಜೆಟ್ ಮಂಡಿಸುತ್ತಿರುವುದಾಗಿ ಸಭಾ ನಾಯಕರು ಘೋಷಿಸಿದರು. ರಾಜ್ಯ ಸರ್ಕಾರ ಸುಳ್ಳು ಭರವಸೆಗಳನ್ನ ನೀಡುತ್ತಿದೆ. ಈ ಹಿಂದೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಮತ್ತಷ್ಟು ಹೊಸ ಬರವಸೆಗಳನ್ನು ನೀಡಿ ರಾಜ್ಯದ ಜನರ ಅಧಿಕೃತಪಿಸುವ ಕೆಲಸ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಓದಿ:Karnataka Budget 2023: ರೈತರಿಗೆ 5 ಲಕ್ಷದವರೆಗೆ ಸಾಲ.. ಮಠ, ಮಂದಿರಗಳ ಅಭಿವೃದ್ಧಿಗೆ 1,000 ಕೋಟಿ