ದ್ರೌಪತಮ್ಮ ದೇವಿಯ ಕರಗ ಮಹೋತ್ಸವ: ವಿಡಿಯೋ - ಕರಗ ಮಹೋತ್ಸವ
ಆನೇಕಲ್: ತಾಲೂಕಿನ ತೆಲಗರಹಳ್ಳಿಯಲ್ಲಿ ಶ್ರೀ ದ್ರೌಪತಮ್ಮ ದೇವಿಯ ಕರಗ ಮಹೋತ್ಸವ ವೈಭವದಿಂದ ಜರುಗಿತು. ಇಂದು ಮುಂಜಾನೆ ದೇವಾಲಯದಿಂದ ಕರಗ ಹೊರಬರುತ್ತಿದ್ದಂತೆ ಅಲಗು ಸೇವೆ ನೆರವೇರಿತು. ಕತ್ತಿಯಿಂದ ಎದೆಗೆ ಬಡಿದುಕೊಂಡು ವೀರ ಕುಮಾರರು ಸೇವೆ ಸಲ್ಲಿಸಿದರು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗ ಸಂಚರಿಸಿತು. ಉತ್ಸವದ ಹಿನ್ನೆಲೆಯಲ್ಲಿ ಮನೆಗಳ ಮುಂದೆ ರಂಗೋಲಿ ಬಿಡಿಸಿ ಅಲಂಕಾರ ಮಾಡಲಾಗಿತ್ತು. ಕರಗೋತ್ಸವ ನೋಡಲು ಜನಸಾಗರವೇ ಹರಿದು ಬಂದಿತ್ತು. ಯುಗಾದಿ ಹಬ್ಬ ಮುಗಿದ ನಂತರ ತೆಲಗರಹಳ್ಳಿಯಲ್ಲಿ ಇತಿಹಾಸ ಪ್ರಸಿದ್ದ ದ್ರೌಪತಮ್ಮ ದೇವಿ ಕರಗ ಮಹೋತ್ಸವ ನಡೆಸುವುದು ಸಂಪ್ರದಾಯ.
ಕ್ಷಮೆ ಯಾಚಿಸಿದ್ದ ಶಾಸಕ ಹ್ಯಾರಿಸ್:ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಬಿಜೆಪಿಯನ್ನು ಟೀಕೆ ಮಾಡುವ ಭರದಲ್ಲಿ ಬೆಂಗಳೂರು ಕರಗದ ಕುರಿತಂತೆ ಶಾಸಕ ಎನ್.ಎ.ಹ್ಯಾರಿಸ್ ನೀಡಿದ್ದ ಹೇಳಿಕೆ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಈ ಸಂಬಂಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಶಾಸಕ ನಗರದ ತಿಗಳರಪೇಟೆಯಲ್ಲಿರುವ ರ್ಮರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಕ್ಷಮೆ ಯಾಚಿಸಿದ್ದರು.
ಇದನ್ನೂ ಓದಿಬೆಂಗಳೂರು ಕರಗದ ಬಗ್ಗೆ ಹೇಳಿಕೆ: ದೇವಸ್ಥಾನಕ್ಕೆ ತೆರಳಿ ಕ್ಷಮೆಯಾಚಿಸಿದ ಶಾಸಕ ಹ್ಯಾರಿಸ್: