ಕರ್ನಾಟಕ

karnataka

ಕನ್ವರ್ ಜಾತ್ರೆ

ETV Bharat / videos

ಒಂದು ಭುಜದಲ್ಲಿ ಗಂಗಾಜಲ, ಮತ್ತೊಂದು ಭುಜದಲ್ಲಿ ವೃದ್ಧ ತಾಯಿ: ಭೋಲೆನಾಥನ ದರ್ಶನಕ್ಕೆ ಹೊರಟ ಮಗ!- ವಿಡಿಯೋ - ಭೋಲೆನಾಥನ ದರ್ಶನ

By

Published : Jul 5, 2023, 9:59 AM IST

ಉತ್ತರಾಖಂಡ: ಹರಿದ್ವಾರದಲ್ಲಿ ನಿನ್ನೆಯಿಂದ ಕನ್ವರ್ ಜಾತ್ರೆ ಆರಂಭವಾಗಿದೆ. ಭೋಲೆನಾಥನ ದರ್ಶನ ಪಡೆಯಲು ದೇಶಾದ್ಯಂತ ಭಕ್ತರು ಹರಿದ್ವಾರಕ್ಕೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ. ಜಾತ್ರೆಯ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪವಿತ್ರ ಯಾತ್ರೆಗೆ ಯುವಕನೊಬ್ಬ ತನ್ನ ವೃದ್ಧ ತಾಯಿಯನ್ನು ಒಂದು ಭುಜದ ಮೇಲೂ ಹಾಗೂ ಗಂಗಾಜಲವನ್ನು ಇನ್ನೊಂದು ಭುಜದ ಮೇಲೂ ಹೊತ್ತುಕೊಂಡು ಹೋಗುತ್ತಿರುವ ದೃಶ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.    

ಮಕ್ಕಳು ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಡುತ್ತಿರುವ ಕಲಿಯುಗದಲ್ಲಿ ಯುವಕನೊಬ್ಬ ಈ ರೀತಿಯಲ್ಲಿ ತನ್ನ ತಾಯಿಯ ಇಷ್ಟಾರ್ಥ ಈಡೇರಿಸುತ್ತಿರುವ ಅಪರೂಪದ ನಿದರ್ಶನವಿದು. ಶ್ರವಣ ಕುಮಾರ ತನ್ನ ತಂದೆ ತಾಯಿಯನ್ನು ಯಾವ ರೀತಿ ಅಪಾರ ಪ್ರೀತಿ, ಭಕ್ತಿ ತೋರಿ ಹೆಗಲ ಮೇಲೆ ಕೂರಿಸಿಕೊಂಡು ದೇವರ ದರ್ಶನ ಮಾಡಿಸಿದ್ದನೋ ಅದೇ ರೀತಿ ರಾಮ್ ಕುಮಾರ್ ಎಂಬ ಈ ಯುವಕ ತನ್ನ ತಾಯಿಯನ್ನು ಹೆಗಲ ಮೇಲೆ ಹೊತ್ತು ಕನ್ವರ್ ಯಾತ್ರೆಗೆ ಹೊರಟಿದ್ದಾನೆ.

"ದೇವರು ನನಗೆ ಇಂತಹ ಸೇವೆಯನ್ನು ಮಾಡಲು ಶಕ್ತಿ ನೀಡುತ್ತಿದ್ದಾನೆ. ನಮ್ಮದು ಸುಮಾರು 150 ಕಿ.ಮೀ.ಗಳ ಪ್ರಯಾಣ. ಮಾರ್ಗದುದ್ದಕ್ಕೂ ನನ್ನ ತಾಯಿ ಮತ್ತು ಗಂಗಾಜಲವನ್ನು ಭುಜದ ಮೇಲೆ ಹೊತ್ತುಕೊಂಡು ಹೋಗುತ್ತೇನೆ" ಅನ್ನೋದು ರಾಮ್‌ ಕುಮಾರ್‌ ಮಾತು.

ಇದನ್ನೂ ಓದಿ :ಆಧುನಿಕ ಶ್ರವಣ ಕುಮಾರ.. ಹಳೆ ಸ್ಕೂಟರ್​​​​ನಲ್ಲೇ ದೇಶ ಸುತ್ತಿಸಿ ತಾಯಿ ಆಸೆ ಈಡೇರಿಸುತ್ತಿರುವ ಮಗ

ABOUT THE AUTHOR

...view details