ಕನ್ನಡ ರಾಜ್ಯೋತ್ಸವ: ದಶಕಗಳಿಂದಲೂ ಮೈಸೂರು ಅರಮನೆಯಲ್ಲಿ ತಾಯಿ ಭುವನೇಶ್ವರಿಗೆ ಪೂಜೆ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿತ್ಯವೂ ಕನ್ನಡ ತಾಯಿ ಭುವನೇಶ್ವರಿಗೆ ನಿತ್ಯವೂ ಪೂಜೆ ಜರುಗುತ್ತದೆ. ಅರಮನೆಯೊಳಗೆ ಜಯಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಭುವನೇಶ್ವರಿ ದೇವಾಲಯದಲ್ಲಿ ದಶಕಗಳಿಂದಲೂ ಪೂಜೆ ಜರುಗುತ್ತಿದೆ. ಈಗ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಅಧೀನದಲ್ಲಿದೆ. ಇಲ್ಲಿ ಅರ್ಚಕರನ್ನು ನೇಮಿಸಿದ್ದು ಕನ್ನಡಾಂಬೆ ಭುವನೇಶ್ವರಿಗೆ ಇಲ್ಲಿ ನಿತ್ಯವೂ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಇದು ಕನ್ನಡ ನೆಲದ ಪ್ರೀತಿಯನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಈ ಕುರಿತು 'ಈಟಿವಿ ಭಾರತ'ದೊಂದಿಗೆ ದೇವಸ್ಥಾನದ ಅರ್ಚಕರು ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ..
Last Updated : Feb 3, 2023, 8:31 PM IST