ಕರ್ನಾಟಕ

karnataka

ಘಾಟಿ ಸುಬ್ರಮಣ್ಯಸ್ವಾಮಿಗೆ ಮುತ್ತಿನ ಅಲಂಕಾರ

ETV Bharat / videos

ಕನ್ನಡ ರಾಜ್ಯೋತ್ಸವ: ಘಾಟಿ ಸುಬ್ರಮಣ್ಯಸ್ವಾಮಿಗೆ ಮುತ್ತಿನ ಅಲಂಕಾರ - ಈಟಿವಿ ಭಾರತ ಕನ್ನಡ

By ETV Bharat Karnataka Team

Published : Nov 1, 2023, 4:12 PM IST

ದೊಡ್ಡಬಳ್ಳಾಪುರ: ಇಂದು ಕನ್ನಡ ರಾಜ್ಯೋತ್ಸವದ ಹಿನ್ನೆಲೆ ರಾಜ್ಯಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಹಾಗೆ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಘಾಟಿ ಕ್ಷೇತ್ರದಲ್ಲೂ ರಾಜ್ಯೋತ್ಸವ ಹಿನ್ನೆಲೆ ಸುಬ್ರಮಣ್ಯಸ್ವಾಮಿ ಮತ್ತು ನರಸಿಂಹಸ್ವಾಮಿಗೆ ವಿಶೇಷ ಅಲಂಕಾರ  ಮಾಡಲಾಗಿದೆ. ಘಾಟಿ  ದೇವಾರಧನೆಗೆ ಕೊಡುವಷ್ಟೇ ಪ್ರಾಮುಖ್ಯತೆ ಕನ್ನಡನಾಡು, ಭಾಷೆಗೆ ಇಲ್ಲಿನ ದೇವಸ್ಥಾನ ಆಡಳಿತ ಮಂಡಳಿ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ನವೆಂಬರ್1 ಕನ್ನಡ ರಾಜ್ಯೋತ್ಸವದಂದು ಸುಬ್ರಮಣ್ಯಸ್ವಾಮಿ ಮತ್ತು ನರಸಿಂಹಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. 

ದೊಡ್ಡಬಳ್ಳಾಪುರದ ಮಂಗಳವಾರ ಭಕ್ತ ಮಂಡಳಿ ಕಳೆದ 26 ವರ್ಷಗಳಿಂದ ಈ ವಿಶೇಷ ಅಲಂಕಾರದ ಸಂಪ್ರದಾಯವನ್ನ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಸುಬ್ರಮಣ್ಯ ಸ್ವಾಮಿಗೆ ಮುತ್ತಿನ ಅಲಂಕಾರ ಹಾಗೂ ಹಿಂಬದಿಯಲ್ಲಿರುವ ನರಸಿಂಹಸ್ವಾಮಿಗೆ ಬೆಣ್ಣೆ ಅಲಂಕಾರವನ್ನ ಮಾಡಲಾಗಿದೆ. ಬೆಳಗ ಮುಂಜಾನೆ 2ಗಂಟೆ ಯಿಂದಲೇ ದೇವರಿಗೆ ಅಭಿಷೇಕ ಮತ್ತು ಪೂಜೆಗಳು ಪ್ರಾರಂಭವಾಗಿದ್ದು ಬೆಳಗ್ಗೆ 7 ಗಂಟೆಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಘಾಟಿ ಸುಬ್ರಮಣ್ಯ ಕ್ಷೇತ್ರದ ಪ್ರಧಾನ ಅರ್ಚಕರಾದ ನಾಗೇಂದ್ರ ಶರ್ಮಾ ಅವರು ಹೇಳಿದರು.  

ಇದನ್ನೂ ಓದಿ:ರಾಜ್ಯೋತ್ಸವ: ಧಾರವಾಡದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಸಂತೋಷ್​ ಲಾಡ್

ABOUT THE AUTHOR

...view details