ಕರ್ನಾಟಕ

karnataka

ಕನ್ನಡ ಉತ್ಸವ

ETV Bharat / videos

ಕೋಲಾರ: ಮುಳಬಾಗಿಲಿನಲ್ಲಿ ಸಂಭ್ರಮದ ಗಡಿನಾಡ ಕನ್ನಡ ಉತ್ಸವ - ವಿಡಿಯೋ - ETV Bharat Kannada News

By ETV Bharat Karnataka Team

Published : Nov 26, 2023, 4:47 PM IST

ಕೋಲಾರ :ಗಡಿನಾಡು ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿಂದು ಗಡಿನಾಡ ಕನ್ನಡ ಉತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಮುಳಬಾಗಿಲು ತಾಲ್ಲೂಕು ಆಡಳಿತ ಹಾಗೂ ಶಾಸಕ ಸಮೃದ್ದಿ ಮಂಜುನಾಥ್ ನೇತೃತ್ವದಲ್ಲಿ ಗಡಿನಾಡ ಉತ್ಸವಕ್ಕೆ ಚಾಲನೆ ನೀಡಲಾಯಿತು. ಆನೆಯ ಮೇಲೆ ಭುವನೇಶ್ವರಿ ತಾಯಿ ಮೆರವಣಿಗೆ ಮಾಜಿ ಸಚಿವ ಶ್ರೀರಾಮುಲು ಚಾಲನೆ ನೀಡಿದರು.

ಬೃಹತ್ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ಬಳಿಕ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮುಳಬಾಗಲು ನಗರದಲ್ಲಿ ಮೆರವಣಿಗೆ ಮಾಡಲಾಯಿತು. ಸುಮಾರು 101 ಅಡಿ ಉದ್ದದ ಧ್ವಜ ಸ್ತಂಭದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಾಯಿತು. ಭಾನುವಾರ ಮತ್ತು ಸೋಮವಾರ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದ್ದು, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರಿಂದ ಸಂಗೀತ ರಸಸಂಜೆ, ಪಾವಗಡ ಮಂಜು ಸೇರಿ ಹಲವು ಕಲಾವಿದರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ಇನ್ನು ಕನ್ನಡದ ನಾಯಕ ನಟ ನೆನಪಿರಲಿ ಪ್ರೇಮ್ ಸೇರಿದಂತೆ ಹಲವು ಕಲಾವಿದರು ಭಾಗಿಯಾಗುವ ಸಾಧ್ಯತೆ ಇದೆ. ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ನಾವೆಲ್ಲಾ ಶ್ರಮಿಸಬೇಕು. ಸರ್ಕಾರಗಳು ಸಹ ಗಡಿನಾಡಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚದಂತೆ ಸರ್ಕಾರದ ಮೇಲೆ ಒತ್ತಡ ಹೇರುವುದು ಗಡಿನಾಡ ಕನ್ನಡ ಉತ್ಸವದ ಮುಖ್ಯ ಉದ್ದೇಶ, ಧ್ಯೇಯ ಎಂದು ಶಾಸಕ ಸಮೃದ್ದಿ ಮಂಜುನಾಥ್ ಹೇಳಿದರು.     

ಇದನ್ನೂ ಓದಿ :ಸಂವಿಧಾನ ದಿನ: ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸಿದ್ದರಾಮಯ್ಯ ಮಾಲಾರ್ಪಣೆ

ABOUT THE AUTHOR

...view details