ಅದ್ಧೂರಿಯಾಗಿ ನೆರವೇರಿದ ಕಣವಿ ವೀರಭದ್ರೇಶ್ವರ ಅಗ್ಗಿ ಉತ್ಸವ- ವಿಡಿಯೋ - ಈಟಿವಿ ಭಾರತ ಕನ್ನಡ
ಬಾಗಲಕೋಟೆ: ಜಾಗೃತ ದೇವರು ಎಂದೇ ಹೆಸರುವಾಸಿಯಾಗಿರುವ ಕಣವಿ ವೀರಭದ್ರೇಶ್ವರ ದೇವಾಲಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಅಗ್ಗಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಪ್ರತೀ ವರ್ಷ ಯುಗಾದಿ ಹಬ್ಬದ ಪಾಂಡ್ಯ ದಿನದಂದು ರಥೋತ್ಸವ ನಡೆಯುತ್ತದೆ. ಮರುದಿನ ಅಗ್ಗಿ ಉತ್ಸವ ನೆರವೇರಿಸುವುದು ಇಲ್ಲಿನ ಪದ್ಧತಿ. ಜಾಗೃತ ಹಾಗೂ ರೌದ್ರಮಯ ದೇವರು ಎಂಬ ಕಾರಣಕ್ಕೆ ಅಗ್ಗಿ ಉತ್ಸವದಲ್ಲಿ ಹಾಯ್ದು ಹರಕೆ ತೀರಿಸಿದರೆ ಸಕಲ ಸಂಕಷ್ಟಗಳು ದೂರವಾಗಿ ವೀರಭದ್ರೇಶ್ವರ ದೇವರು ಒಳ್ಳೆದು ಮಾಡುತ್ತಾನೆ ಎಂಬುದು ಭಕ್ತರ ನಂಬಿಕೆ. ಈ ದಿನದಂದು ಭಕ್ತರು ಅಗ್ಗಿ ಹಾಯ್ದು, ದೇವರ ದರ್ಶನ ಪಡೆದುಕೊಳ್ಳುತ್ತಾರೆ.
ದೇವಾಲಯದೆದುರು ಸಂಜೆ ಸಮಯದಲ್ಲಿ 8 ಅಡಿ ಉದ್ದ ಮತ್ತು 8 ಅಡಿ ಅಗಲದ ಅಗ್ನಿಕುಂಡ ರಚಿಸಿ ಪೂಜೆ ಸಲ್ಲಿಸಿ ಉತ್ಸವದಲ್ಲಿ ಭಾಗಿಯಾಗುತ್ತಾರೆ. ಇದಕ್ಕೂ ಮೊದಲು ವೀರಭದ್ರೇಶ್ವರ ದೇವರ ಮೂರ್ತಿಯನ್ನು ಪಲಕ್ಕಿಯಲ್ಲಿಟ್ಟು ಅಗ್ಗಿಯ ಸ್ಥಳ ಪೂಜೆ ಮಾಡಿ, ಐದು ಬಾರಿ ಪ್ರದಕ್ಷಿಣೆಯ ನಂತರ ಪಲ್ಲಕ್ಕಿ ಸಮೇತ ಅಗ್ನಿಕೆಂಡ ಹಾಯ್ದು ಹೋಗುತ್ತಾರೆ. ನಂತರ ಸೇರಿದ ಭಕ್ತ ಸಮೂಹ ಅಗ್ಗಿಯಲ್ಲಿ ಹಾಯ್ದು ಹರಕೆ ಪೂರೈಸುತ್ತಾರೆ.
ಇದನ್ನೂ ಓದಿ:ಶ್ರೀ ಸಿದ್ಧೇಶ್ವರ ರಥೋತ್ಸವಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚಣೆ: ವಿಡಿಯೋ