ಕಡುಬಿನ ಕಾಳಗ: ಈ ವರ್ಷ ಮಳೆ ಹೇಗಿರಲಿದೆ? ಕಾರ್ಣಿಕ ಕೇಳಿ.. - ಮಳೆ ರಾಜೇಂದ್ರ ಸ್ವಾಮಿ ಮಠ
ಬಾಗಲಕೋಟೆ: ವರ್ಷದ ಮಳೆ, ಬೆಳೆ ಮತ್ತು ರಾಜಕೀಯದ ಕುರಿತು ಭವಿಷ್ಯ ನುಡಿಯುವ ಅನೇಕ ಕಾರ್ಣಿಕ ಆಚರಣೆಗಳಿವೆ. ಅಂತಹ ವಿಶಿಷ್ಟ ಆಚರಣೆಗಳಲ್ಲಿ ಕಡುಬಿನ ಕಾಳಗವೂ ಒಂದು. ಮುರನಾಳ ಪುನರ್ ವಸತಿ ಕೇಂದ್ರದಲ್ಲಿರುವ ಮಳೆ ರಾಜೇಂದ್ರ ಸ್ವಾಮಿ ಮಠದಲ್ಲಿ ಪ್ರತಿ ವರ್ಷ ನೆರವೇರುವ ಜಾತ್ರಾ ಮಹೋತ್ಸವದಂದು ಕಡುಬಿನ ಕಾಳಗ ಎಂಬ ವಿಶೇಷ ಮಳೆ ಸೂಚನೆ ನೀಡುವ ಭವಿಷ್ಯ ನುಡಿಯಲಾಗುತ್ತದೆ. ಇಲ್ಲಿನ ವಾಣಿಯಂತೆ ಮಳೆ ಆಗುತ್ತದೆ ಎಂಬುದು ಜನರ ನಂಬಿಕೆ.
ಇದನ್ನೂ ಓದಿ :ಸರ್ವರು ಎಚ್ಚರದಿಂದರಬೇಕು ಪರಾಕ್: ಬೀರೂರಿನಲ್ಲಿ ಕಾರ್ಣಿಕ ಭವಿಷ್ಯ
ಪ್ರತಿ ವರ್ಷದಂತೆ ಈ ಬಾರಿಯೂ ಸಹ ಮುರನಾಳದಲ್ಲಿ ಮಠದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆಗಳಾದ ರೋಹಿಣಿ, ಪುಷ್ಯ, ಪುನರ್ವಸು ಹಾಗೂ ಹಿಂಗಾರು ಮಳೆಗಳಲ್ಲಿ ಸ್ವಾತಿ, ಚಿತ್ತ ಮಳೆಗಳು ಸಂಪೂರ್ಣ ಆಗಲಿದೆ ಎಂಬುದು ಮಳೆರಾಜೇಂದ್ರಸ್ವಾಮಿ ಮಠದ ವಾಣಿ.
ಇದನ್ನೂ ಓದಿ: 'ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್': ಗೊರವಯ್ಯ ನುಡಿದ ಕಾರ್ಣಿಕ ವಾಣಿ ಅರ್ಥವೇನು?
ಪ್ರತಿ ವರ್ಷ ಜಾತ್ರೆಯ ವೇಳೆ ಮೆರವಣಿಗೆಯಲ್ಲಿ ಸಾಗುವ ಗ್ರಾಮಸ್ಥರು ಗಂಗೆಯಲ್ಲಿ ಮಳೆರಾಜೇಂದ್ರಸ್ವಾಮಿಗೆ ಜಲಾಭಿಷೇಕ ಮಾಡಿ ಗಂಗಾ ಹೊಂಡದಿಂದ ಬಿಂದಿಗೆಗಳನ್ನು ತುಂಬಿಕೊಂಡು ಅವುಗಳಿಗೆ ಮಳೆಗಳ ಹೆಸರು ಬರೆದು ಪೂಜೆ ಸಲ್ಲಿಸುತ್ತಾರೆ. ಬಿಂದಿಗೆಗಳ ಬಸಿಯುವಿಕೆ ಆಧರಿಸಿ ಮಳೆ ಮುನ್ಸೂಚನೆ ಹೊರಬೀಳುತ್ತದೆ. ಇಲ್ಲಿನ ಮಳೆ ಭವಿಷ್ಯ ಕೇಳಲೆಂದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು, ರೈತರು ಬುಧವಾರ ರಾತ್ರಿ ಸಂಭ್ರಮದಿಂದ ಸೇರಿದ್ದರು. ಮಠದ ಮೇಲೆ ಇಲ್ಲಿನ ಜನರಿಗೆ ವಿಶೇಷ ಭಕ್ತಿ ಕಂಡುಬಂತು.
ಇದನ್ನೂ ಓದಿ : ಮುಳ್ಳಿನ ಗದ್ದಿಗೆ ಉತ್ಸವಕ್ಕೆ ಹರಿದು ಬಂದ ಭಕ್ತಸಾಗರ.. ಆತಂಕ ಸೃಷ್ಟಿಸಿದೆ ಕಾರ್ಣಿಕ ಭವಿಷ್ಯ