ಪುನೀತ್ ಬರ್ತ್‌ಡೇ ದಿನವೇ 'ಕಬ್ಜ' ರಿಲೀಸ್; ಅಭಿಮಾನಿಗಳ ಸಂಭ್ರಮ- ವಿಡಿಯೋ - ಪುನೀತ್ ಬರ್ತ್‌ಡೇ ಗಿಫ್ಟ್
ಇಂದು ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ. ಇದೇ ದಿನ ವಿಶ್ವಾದ್ಯಂತ ನಟ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಕಬ್ಜ' ಸಿನಿಮಾ ಜಗತ್ತಿನೆಲ್ಲೆಡೆ 4 ಸಾವಿರ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ 200ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ತೆರೆ ಕಾಣುತ್ತಿದೆ.
ರಾಜ್ಯದ 450 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ಕಟೌಟ್ ಹೂಗಳಿಂದ ಕಂಗೊಳಿಸುತ್ತಿತ್ತು. ಚಿತ್ರ ಮಂದಿರದೆದುರು ಮೊದಲ ದಿನದ ಶೋಗಳು ಹೌಸ್ ಫುಲ್ ಎಂದು ಬೋರ್ಡ್ ಹಾಕಲಾಗಿದೆ. ಇದೇ ಮೊದಲ ಬಾರಿಗೆ ಒಂದೇ ಕಟೌಟ್ನಲ್ಲಿ ಉಪೇಂದ್ರ, ಸುದೀಪ್ ಹಾಗೂ ಶಿವಣ್ಣ ಮಿಂಚಿದ್ದಾರೆ. ಈ ಕಟೌಟ್‌ನ ಎದುರು ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಕಬ್ಜ ನಿರ್ದೇಶಕ ಆರ್.ಚಂದ್ರು ಅವರ ಕನಸು 5 ಭಾಷೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹೈದರಾಬಾದ್, ಚೆನ್ನೈ, ದೆಹಲಿ ಹಾಗೂ ಮುಂಬೈ ಭಾಗದಲ್ಲಿ ಹೆಚ್ಚಿನ ಶೋಗಳು ಸಿಕ್ಕಿವೆ. ಚಿತ್ರ 1942ರ ರೌಡಿಸಂ ಕಥಾನಕ ಹೊಂದಿದೆ. ವಿಭಿನ್ನ ಟೈಟಲ್, ಟ್ರೇಲರ್‌ನಿಂದ ಸಿನಿಮಾ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು.
ಇದನ್ನೂ ಓದಿ:ಕಬ್ಜ ದೊಡ್ಡ ಸಿನಿಮಾ ಆಗುತ್ತೆಂದು ಭವಿಷ್ಯ ನುಡಿದಿದ್ದ ಪುನೀತ್ ರಾಜ್ಕುಮಾರ್