ಕರ್ನಾಟಕ

karnataka

ETV Bharat / videos

ಹೈಕೋರ್ಟ್ ನ್ಯಾ.ಬಿ.ವೀರಪ್ಪ ಜಿಲ್ಲಾಸ್ಪತ್ರೆ ಪರಿಶೀಲನೆ.. 94 ವರ್ಷದ ವೃದ್ಧೆಯ ಕಾಲು ಮುಟ್ಟಿ ನಮಸ್ಕಾರ - dharwada district hospital

By

Published : May 21, 2022, 10:12 AM IST

Updated : Feb 3, 2023, 8:23 PM IST

ಧಾರವಾಡ: ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕುಡಿದು ಆರೋಗ್ಯ ಕೆಡಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕನ ಆರೋಗ್ಯ ವಿಚಾರಿಸಿದ್ದಾರೆ. ಶುಕ್ರವಾರದಂದು ಧಾರವಾಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ವೇಳೆ ಯುವಕನೊಂದಿಗೆ ಮಾತನಾಡಿದ್ದಾರೆ. ಯಾವ ಬ್ರ್ಯಾಂಡ್ ಮದ್ಯ ಸೇವಿಸುತ್ತೀಯಾ? ಸಣ್ಣ ವಯಸ್ಸಿಗೆ ಕುಡಿಯೋ ಚಟವೇ? ಎಂದು ಪ್ರಶ್ನಿಸಿದರು. ಅಲ್ಲದೆ, ಕುಡಿಯೋದನ್ನು ಬಿಟ್ಟು ಬಿಡು ಎಂದು ಸಲಹೆ ನೀಡಿದರು. ವಾರ್ಡ್‌ಗಳ ಭೇಟಿ ವೇಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ 94ರ ವೃದ್ಧೆಯ ಆರೋಗ್ಯ ವಿಚಾರಣೆ ನಡೆಸಿದರು. ಅಜ್ಜಿಯ ಪಾದಮುಟ್ಟಿ ನಮಸ್ಕರಿಸಿದರು.
Last Updated : Feb 3, 2023, 8:23 PM IST

ABOUT THE AUTHOR

...view details