ಶೃಂಗೇರಿ ಶಾರದಾ ಪೀಠಕ್ಕೆ ಜೆ.ಪಿ ನಡ್ಡಾ ಭೇಟಿ: ಶ್ರೀಗಳ ಜೊತೆ ಸಮಾಲೋಚನೆ - JP Nadda latest news
ಚಿಕ್ಕಮಗಳೂರು: ಶೃಂಗೇರಿ ಶಾರದಾ ಪೀಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ ನೀಡಿದ್ದರು. ಮಠದ ಆಡಳಿತ ಮಂಡಳಿ ಅವರನ್ನು ಸ್ವಾಗತ ಮಾಡಿದ್ದು, ನೇರವಾಗಿ ಶೃಂಗೇರಿಯ ನರಸಿಂಹ ವನದಲ್ಲಿರುವ ಗುರು ನಿವಾಸಕ್ಕೆ ಜೆ.ಪಿ ನಡ್ಡಾ ಭೇಟಿ ನೀಡಿದ್ದರು
ಮಠದ ಜಗದ್ಗುರುಗಳ ದರ್ಶನಕ್ಕೆ ಪಡೆದು, ಆಶೀರ್ವಾದ ಪಡೆದುಕೊಂಡಿದ್ದಾರೆ. 15 ನಿಮಿಷಗಳ ಕಾಲ ಜೆ.ಪಿ ನಡ್ಡಾ ಶ್ರೀಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ರಾಷ್ಟ್ರೀಯ ಅಧ್ಯಕ್ಷರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಚಿವ ಸಿ.ಟಿ ರವಿ ಸಾಥ್ ನೀಡಿದ್ದಾರೆ.
ಗುರು ನಿವಾಸಕ್ಕೆ ತೆರಳುವ ವೇಳೆ ಸಿ.ಟಿ.ರವಿ ಅವರು ತುಂಗಾ ನದಿಯ ಸಂಪೂರ್ಣ ಪರಿಚಯ ಮಾಡಿ ಕೊಟ್ಟಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ ಅವರು ಕೂಡ ಕೆಲ ಮಾಹಿತಿ ನೀಡಿದ್ದಾರೆ. ತುಂಗ ಹಾಗೂ ಭದ್ರಾ ಎರಡೂ ನದಿಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟುವುದು. ನಂತರ ಶಿವಮೊಗ್ಗ ಜಿಲ್ಲೆಯ ಕೂಡ್ಲಿ ಗ್ರಾಮದಲ್ಲಿ ಒಂದಾಗಲಿವೆ. ಬಳಿಕ ತುಂಗಭದ್ರಾ ನದಿಯಾಗಿ ಹೊಸಪೇಟೆ ಮೂಲಕ ಡ್ಯಾಂ ಸೇರಲಿದೆ. ತುಂಗ - ಭದ್ರಾ - ಹೇಮಾವತಿ - ಯಗಚಿ - ನೇತ್ರಾವತಿ ನದಿಗಳ ಬಗ್ಗೆ ಮಾಹಿತಿ ಸಿ.ಟಿ.ರವಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಮಾಹಿತಿ ನೀಡಿದರು. ಗುರು ನಿವಾಸ ಭೇಟಿ ಬಳಿಕ ಜೆ.ಪಿ ನಡ್ಡಾ ಅವರು ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಶೃಂಗೇರಿಯ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ದೇವರಿಗೆ ವಿಶೇಷ ಪೂಜೆ, ಹಾಗೂ ಪ್ರಾರ್ಥನೆ ಸಲ್ಲಿಸಲಿದ್ದಾರೆ.