ಗಂಧದ ಗುಡಿ: ತೆರೆ ಹಿಂದಿನ ಕಥೆ ಹೇಳಿದ ಅಶ್ವಿನಿ ಪುನೀತ್ ರಾಜ್ಕುಮಾರ್ - ಗಂಧದ ಗುಡಿ ತೆರೆ ಹಿಂದಿನ ಕಥೆ ಬಿಚ್ಚಿಟ್ಟ ಅಶ್ವಿನಿ
ಪುನೀತ್ ರಾಜ್ಕುಮಾರ್ ಕನಸಿನ ಕೊನೆಯ ಚಿತ್ರ ಗಂಧದ ಗುಡಿ. ಈ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಾಗರಹೊಳೆ ಹುಲಿ ಅಭಯಾರಣ್ಯದಿಂದ ಆರಂಭವಾಗುವ ಪುನೀತ್ ರಾಜ್ಕುಮಾರ್ ಮತ್ತು ಅಮೋಘ ವರ್ಷ ನಿರ್ದೇಶನದ ಸಿನಿಮಾ ಹಲವು ಕೌತುಕಗಳಿಗೆ ಸಾಕ್ಷಿಯಾಗುತ್ತದೆ. ಒಂದು ವರ್ಷ ಶೂಟಿಂಗ್ ಮಾಡಿದ್ದು ಹೇಗೆ?, ಅಪ್ಪು ಚಿತ್ರದಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡ ಪರಿ, ತೆರೆ ಹಿಂದೆ ಯಾರೆಲ್ಲಾ ಕೆಲಸ ಮಾಡಿದರು ಎನ್ನುವುದನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಂಚಿಕೊಂಡಿದ್ದಾರೆ. ಸಿನಿಮಾದ ವೈಶಿಷ್ಟ್ಯದ ಬಗ್ಗೆ ನಿರ್ದೇಶಕ ಅಮೋಘ ವರ್ಷ, ಕ್ಯಾಮರಾಮನ್ ಪ್ರಿತೀಕ್ ಶೆಟ್ಟಿ, ಪುನೀತ್ ರಾಜ್ಕುಮಾರ್ ಪರ್ಸನಲ್ ಕಾಸ್ಟೂಮ್ ಡಿಸೈನರ್ ಯೋಗಿ ಜಿ ರಾಜ್ ಸೇರಿದಂತೆ ಅನೇಕರು ಸಾಕಷ್ಟು ಆಸಕ್ತಿದಾಯಕ ವಿಚಾರಗಳನ್ನು ಹೇಳಿದ್ದಾರೆ.
Last Updated : Feb 3, 2023, 8:32 PM IST