ಕರ್ನಾಟಕ

karnataka

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕ ಉಪಾಧ್ಯಕ್ಷೆ ಜಿನತ್ ಟಂಕಸಾಲಿ ಹಾಗೂ ಜಮೀರ್​ ಅಹಮ್ಮದ್​

ETV Bharat / videos

ಜಮೀರ್​ ಅಹಮ್ಮದ್​ಗೆ ಡಿಸಿಎಂ ಸ್ಥಾನ ನೀಡುವಂತೆ ಜಿನತ್​ ಟಂಕಸಾಲಿ ಒತ್ತಾಯ - ಜಮೀರ್ ಅಹಮ್ಮದ್

By

Published : May 18, 2023, 3:56 PM IST

ಬಾಗಲಕೋಟೆ: ಅಲ್ಪಸಂಖ್ಯಾತರ ಮುಖಂಡರಾಗಿರುವ ಜಮೀರ್ ಅಹಮ್ಮದ್ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಹಾಗೂ ಇನ್ನೂ ಮೂವರು ಅಲ್ಪಸಂಖ್ಯಾತರ ಶಾಸಕರಿಗೆ ಸಚಿವ ಸಂಪುಟ ಸ್ಥಾನಮಾನ ನೀಡಬೇಕು ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕ ಉಪಾಧ್ಯಕ್ಷೆ ಜಿನತ್ ಟಂಕಸಾಲಿ ಒತ್ತಾಯಿಸಿದ್ದಾರೆ.

ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಶೇಕಡಾ 80ರಷ್ಟು ಅಲ್ಪಸಂಖ್ಯಾತರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ‌ 135 ಸ್ಥಾನಗಳನ್ನು ಪಡೆದುಕೊಂಡು ಬಹುಮತ ಸಾಧಿಸಿದೆ. ಇದರಲ್ಲಿ ಒಂಬತ್ತು ಶಾಸಕರು ಅಲ್ಪಸಂಖ್ಯಾತರು ಇದ್ದು, ನಾಲ್ವರಿಗೆ ಸಚಿವ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಬಿಜೆಪಿ ಪಕ್ಷವು ರಾಜ್ಯದಲ್ಲಿ ಕೋಮು‌ ಭಾವನೆ ಮೂಡಿಸಿ, ಅಲ್ಪ ಸಂಖ್ಯಾತರನ್ನು ಕಡೆಗಣನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಅಲ್ಪಸಂಖ್ಯಾತರು ಅಭೂತಪೂರ್ವ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್ ‌ಪಕ್ಷ ಬಹುಮತ ಪಡೆದಿದೆ. ಹಾಗಾಗಿ ಜಮೀರ್​ ಅಹಮ್ಮದ ಅವರಿಗೆ ಡಿಸಿಎಂ ಸ್ಥಾನ ನೀಡಿ ಉಳಿದ ಮೂವರು ಅಲ್ಪಸಂಖ್ಯಾತ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪಕ್ಷದ ಹೈಕಮಾಂಡ್​ಗೆ ಜಿನತ್ ಟಂಕಸಾಲಿ ಮನವಿ ಮಾಡಿದ್ದಾರೆ.

ಇದನ್ನೂ ನೋಡಿ:ಸಿಎಂ ಆಯ್ಕೆ ವಿಚಾರದಲ್ಲಿ ನನಗೆ ಸಂಪೂರ್ಣ ಸಂತೋಷವಿಲ್ಲ: ಡಿ.ಕೆ.ಸುರೇಶ್​

ABOUT THE AUTHOR

...view details