ನಾವು 50 ಆಕಳ ಕಟ್ಟಿದ್ರೂ ಒಂದೇ ಹೋರಿ ಕಟ್ಟೋದು: ಸಿಎಂ ಇಬ್ರಾಹಿಂ ವರಸೆ ನೋಡಿ! - ಈಟಿವಿ ಭಾರತ ಕನ್ನಡ
ಬೆಳಗಾವಿ: ವಿಜಯಪುರ ಜೆಡಿಎಸ್ ಶಾಸಕ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಮ್ಮ ನಾಲಿಗೆ ಹರಿಬಿಟ್ಟರು. ಬಿಜೆಪಿಯವರಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿ ಇಲ್ಲ. ನಾವು ಹುಟ್ಟಿಸಿದ ಮಕ್ಕಳನ್ನು ತೆಗೆದುಕೊಂಡು ಹೋಗ್ತಿದ್ದಾರೆ. ಅವರು ಎಂಥ ಗಂಡಸರು ಎಂದು ಪ್ರಶ್ನಿಸಿದರು. ಹಾಗಾಗಿ, ಬಿಜೆಪಿಯವರು ಬೀಜ ಇಲ್ಲದವರು. ಇನ್ನೊಬ್ಬರ ಬೀಜ ತಗೊಂಡು, ನಮ್ಮ ಬೀಜ ಅಂತೀರಾ. ನಾಚಿಕೆ ಆಗಲ್ವಾ ನಿಮಗೆ?. ಇನ್ನು ನೂರು ಕರೆದುಕೊಂಡು ಹೋಗಿ. ನೂರನ್ನು ಹುಟ್ಟಿಸುವ ಶಕ್ತಿ ನಮಗೆ ಇದೆ ಎಂದು ಇಬ್ರಾಹಿಂ ಹೇಳಿದ್ದಾರೆ. ಇದೇನಾ ನಿಮಗೆ ಮೋದಿ ಕಲಿಸಿರುವುದು. ಇನ್ನು ಅವರು ನೂರು ಜನಾ ಇದ್ದಾರೆ. ನೀವು ಒಬ್ಬರು ಏನ್ ಮಾಡ್ತೀರಿ ಅಂತಾ ಕೇಳಿದ್ರು. ನಾನು ಹೇಳ್ದೆ, ನಾವು ರೈತರು 50 ಆಕಳ ಕಟ್ಟಿದ್ರೆ ಒಂದೇ ಹೋರಿ ಕಟ್ಟೋದು. 50 ಹೋರಿ ಕಟ್ಟಲ್ಲ. ಒಂದೇ ಸಾಕು ನಮಗೆ ಅಂತಾ ಹೇಳಿದ್ದೇನೆ. ಇವತ್ತು ಜನತಾದಳ, ದೇವೇಗೌಡರ ಬೀಜ ಬಲವಾಗಿದೆ. ಈ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Last Updated : Feb 3, 2023, 8:31 PM IST