ಕರ್ನಾಟಕ

karnataka

ETV Bharat / videos

ದೊಡ್ಡಬಳ್ಳಾಪುರಕ್ಕೆ ಎಂಟ್ರಿ ಕೊಟ್ಟ ಪಂಚರತ್ನ ರಥಯಾತ್ರೆ... ಹೆಚ್​ಡಿಕೆಗೆ ಅದ್ದೂರಿ ಸ್ವಾಗತ - ಹೆಚ್​ಡಿಕೆ ಮದುರೆ ಗ್ರಾಮದಲ್ಲಿ ವಾಸ್ತವ್ಯ

By

Published : Nov 29, 2022, 3:01 PM IST

Updated : Feb 3, 2023, 8:33 PM IST

ದೊಡ್ಡಬಳ್ಳಾಪುರ: ಪಂಚರತ್ನ ರಥಯಾತ್ರೆ ಇಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ನಿನ್ನೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಾಗಿದ್ದ ರಥಯಾತ್ರೆ, ಇಂದು ನಾಗದೇನಹಳ್ಳಿ ಗ್ರಾಮದ ಮೂಲಕ ದೊಡ್ಡಬಳ್ಳಾಪುರಕ್ಕೆ ಆಗಮಿಸಿದೆ. ಹೆಚ್​ಡಿ ಕುಮಾರಸ್ವಾಮಿ ಅವರನ್ನು ಸುಮಾರು ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಬೃಹತ್ ಸೇಬಿನ ಹಾರ ಮತ್ತು ಮಲ್ಲಿಗೆ ಹಾರ ಹಾಕುವ ಮೂಲಕ ಸ್ವಾಗತಿಸಿದ್ದಾರೆ. ಈ ವೇಳೆ, ಹೆಚ್​ಡಿಕೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಜೆಡಿಎಸ್ ಮುಖಂಡರಾದ ಹರೀಶ್ ಗೌಡ ಮತ್ತು ಅಪ್ಪಯ್ಯಣ್ಣ ಸಾಥ್ ನೀಡಿದ್ದಾರೆ. ಇಂದು ಹೆಚ್​ಡಿಕೆ ಮದುರೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
Last Updated : Feb 3, 2023, 8:33 PM IST

ABOUT THE AUTHOR

...view details