ವಿಡಿಯೋ: ನೃತ್ಯದ ಮೂಲಕ ಕೃಷ್ಣನಿಗೆ ಹೂಮಾಲೆ ಅರ್ಪಿಸಿದ ಜೆಡಿಎಸ್ ಶಾಸಕ - ನೃತ್ಯ ಮಾಡುತ್ತಲೇ ಕೃಷ್ಣನಿಗೆ ಹೂವಿನ ಮಾಲೆ ಅರ್ಪಿಸಿದ ಜೆಡಿಎಸ್ ಶಾಸಕ
ತುಮಕೂರು: ಶ್ರೀಕೃಷ್ಣ ಜನ್ಮಾಷ್ಟಮಿಯಂದು ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ಮೂಲಕ ಜೆಡಿಎಸ್ ಶಾಸಕ ಗೌರಿಶಂಕರ್ ಗಮನ ಸೆಳೆದರು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಗೌರಿಶಂಕರ್ ಇಂದು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಚಿಕ್ಕಣ್ಣ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಹೂವಿನ ಮಾಲೆಗಳನ್ನು ಹಿಡಿದು ಶ್ರೀಕೃಷ್ಣನಿಗೆ ನೃತ್ಯ ಸೇವೆಯ ಮೂಲಕ ಅರ್ಪಿಸಿದರು. ವಿಶೇಷ ಪದ್ಧತಿಯಂತೆ ಪ್ರತಿವರ್ಷ ದೇಗುಲದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಡೆಯಲಿದೆ.
Last Updated : Feb 3, 2023, 8:26 PM IST