ಕರ್ನಾಟಕ

karnataka

ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ETV Bharat / videos

ಪರೀಕ್ಷೆ ಪಾಸ್​ ಮಾಡಲು ದೈಹಿಕ​ ಸಂಬಂಧ ಬೆಳೆಸುವಂತೆ ವಿದ್ಯಾರ್ಥಿನಿಗೆ ಶಿಕ್ಷಕನ ಬೇಡಿಕೆ: ವಿಡಿಯೋ ವೈರಲ್​

By

Published : May 26, 2023, 9:53 PM IST

ಜೌನ್‌ಪುರ (ಉತ್ತರ ಪ್ರದೇಶ): ಕಾಲೇಜು ಶಿಕ್ಷಕರೊಬ್ಬರು, ವಿದ್ಯಾರ್ಥಿನಿಯೊಬ್ಬರರಿಗೆ ಪರೀಕ್ಷೆಯಲ್ಲಿ ಪಾಸ್​ ಮಾಡಲು ಸಹಾಯ ಮಾಡುವುದಾಗಿ ಹಾಗೂ ಇದಕ್ಕಾಗಿ ನೀನು ನನ್ನ ಜತೆ ದೈಹಿಕ ಸಂಬಂಧ ಬೆಳೆಸುವಂತೆ ಬೇಡಿಕೆ ಇಟ್ಟಿರುವ ವಿಡಿಯೋವೊಂದು ವೈರಲ್ ಆಗಿದೆ.  ವಿದ್ಯಾರ್ಥಿಗಳು ಶಿಕ್ಷಕನ ವಿರುದ್ಧ ಆಕ್ರೋಶ ಹೊರ ಹಾಕಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಘಟನೆ ಉತ್ತರಪ್ರದೇಶದ ಜೌನ್​ಪುರದಲ್ಲಿ ನಡೆದಿದೆ. 

ಇಲ್ಲಿನ ಪೂರ್ವಾಂಚಲದ ಟಿಡಿ ಕಾಲೇಜಿನ ಪ್ರಾಚೀನ ಇತಿಹಾಸ ವಿಭಾಗದ ಮುಖ್ಯಸ್ಥರ  ವಿರುದ್ಧ ಈ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿಯೊಬ್ಬರಿಗೆ ಬಿಇಡಿ ಹಾಗೂ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಸಹಾಯ ಮಾಡವುದಾಗಿ ಭರವಸೆ ನೀಡಿದ್ದ ಪ್ರಾಧ್ಯಾಪಕ,  ಇದಕ್ಕಾಗಿ  ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ವಿದ್ಯಾರ್ಥಿನಿ ಶಿಕ್ಷಕನ ಬೇಡಿಕೆಯನ್ನು ತನ್ನ ಮೊಬೈಲ್​ನಲ್ಲಿ ಸೆರೆಹಿಡಿದುಕೊಂಡಿದ್ದರು ಎನ್ನಲಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಕೂಡ ಆಗಿದೆ. 

ಘಟನೆ ಕುರಿತು ಮಾಹಿತಿ ನೀಡಿದ ಕಾಲೇಜು ಪ್ರಾಂಶುಪಾಲ ಅಲೋಕ್ ಕುಮಾರ್ ಸಿಂಗ್, ಪ್ರದೀಪ್ ಕುಮಾರ್ ಸಿಂಗ್ ಪ್ರಾಚೀನ ಇತಿಹಾಸದ ಶಿಕ್ಷಕ. ಅವರ ವಿಡಿಯೊ ವೈರಲ್ ಆಗಿದ್ದು, ಕಾಲೇಜಿನ ಮೇಲ್ ಐಡಿಯಿಂದ ಅವರಿಗೆ ಈ ಬಗ್ಗೆ ನೋಟಿಸ್ ನೀಡಲಾಗಿದ್ದು, ಇದಕ್ಕೆ ವಿವರಣೆ ನೀಡುವಂತೆ ಸೂಚನೆ ನೀಡಲಾಗಿದೆ. ಆದರೇ ಈ ವರೆಗೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವೈರಲ್ ಆಗುತ್ತಿರುವ ವಿಡಿಯೋ ತುಂಬಾ ನಾಚಿಕೆಗೇಡಿನ ಸಂಗತಿ ಎಂದ ಪ್ರಾಂಶುಪಾಲರು ಸತ್ಯಾಸತ್ಯತೆ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಘಟನೆಯಿಂದ ಆಕ್ರೋಶಗೊಂಡ ಕಾಲೇಜು ವಿದ್ಯಾರ್ಥಿಗಳು, ಪ್ರಾಂಶುಪಾಲರ ಕೊಠಡಿಗೆ ತಲುಪಿ ಪ್ರತಿಭಟನೆ ನಡೆಸಿದ್ದಾರೆ. ನಾವು ತಪ್ಪು ಮಾಡಿದರೆ ತನಿಖೆ ನಡೆಸದೇ ನಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಈಗ ಪ್ರಾಧ್ಯಾಪಕರಿಂದ ಇಂತಹ ಅಶ್ಲೀಲ ಕೆಲಸಗಳು ನಡೆಯುತ್ತಿರುವಾಗ ಈ ಬಗ್ಗೆ ಯಾವಾಗ ಕ್ರಮ ಕೈಗೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿ, ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಅಲ್ಲದೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೃಹತ್​ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆಯನ್ನೂ ಕೂಡಾ ನೀಡಿದ್ದಾರೆ.  ಆದರೆ ಈ ಬಗ್ಗೆ ಇದು ವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. 

ಇದನ್ನೂ ಓದಿ:'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ನಿರ್ದೇಶಕರಿಗೆ ನೋಟಿಸ್​ ಜಾರಿಗೊಳಿಸಿದ ಕೋಲ್ಕತ್ತಾ ಪೊಲೀಸರು 

ABOUT THE AUTHOR

...view details