ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಗಾಲಿ ಜನಾರ್ದನ ರೆಡ್ಡಿ ದಂಪತಿ ಭೇಟಿ - ಈಟಿವಿ ಭಾರತ ಕನ್ನಡ
ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ದಂಪತಿ ಭೇಟಿ ನೀಡಿದರು. ಇಂದು ಬೆಳಗ್ಗೆ ಮಡದಿ ಅರುಣಾ ಲಕ್ಷ್ಮೀ ಅವರೊಂದಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ದೇವಾಲಯಕ್ಕೆ ಆಗಮಿಸಿದ ರೆಡ್ಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ದೇವಾಲಯದ ಸಿಬ್ಬಂದಿ, ರೆಡ್ಡಿ ದಂಪತಿಗಳ ಪೂಜಾ ಕಾರ್ಯಗಳಿಗೆ ನೆರವಾದರು.
ನಿನ್ನೆಯಷ್ಟೇ ಜನಾರ್ದನ ರೆಡ್ಡಿ ಪತ್ನಿ ಸಮೇತ ರಾಜಸ್ಥಾನದ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿದ್ದರು. ಅಜ್ಮೀರ್ನ ಖಾಜಾ ಗರೀಬ್ ನವಾಜ್ ದರ್ಗಾಕ್ಕೆ ತೆರಳಿದ್ದ ರೆಡ್ಡಿ ದಂಪತಿ ಚಾದರ ಮತ್ತು ಹೂ ಸಮರ್ಪಣೆ ಮಾಡಿದ್ದರು.
ಇದನ್ನೂ ನೋಡಿ :ವಿಡಿಯೋ ನೋಡಿ... ಅಜ್ಮೀರ್ನ ಸಂತ ಖ್ವಾಜಾ ಗರೀಬ್ ದರ್ಗಾಕ್ಕೆ ರೆಡ್ಡಿ ಭೇಟಿ.!