ಕಾರಿನ ಟಾಪ್ ಮೇಲೆ ಕುಳಿತು ಸಂಚರಿಸಿದ ಪವನ್ ಕಲ್ಯಾಣ್: ವಿಡಿಯೋ ವೈರಲ್ - Rides on top of car video viral
ಗುಂಟೂರು (ಆಂಧ್ರ ಪ್ರದೇಶ): ಜನಸೇನಾ ಪಕ್ಷದ ಅಧ್ಯಕ್ಷ, ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಕಾರಿನ ಟಾಪ್ ಮೇಲೆ ಕುಳಿತು ಪ್ರಯಾಣಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಇಪ್ಪತಂ ಗ್ರಾಮದಲ್ಲಿ ರಸ್ತೆ ಅಗಲೀಕರಣದ ವೇಳೆ ಮನೆಗಳು ಧ್ವಂಸಗೊಂಡ ಸಂತ್ರಸ್ತರನ್ನು ಭೇಟಿಯಾಗಲು ಶನಿವಾರ ಅವರು ಹೊರಟಿದ್ದರು. ಆದರೆ, ಮಂಗಳಗಿರಿಯಲ್ಲಿ ವಾಹನಗಳನ್ನು ಪೊಲೀಸರು ತಡೆದರು. ಇದರಿಂದ ಪವನ್ ಕಲ್ಯಾಣ್ ಕಾರಿನಿಂದ ಇಳಿದು ಕಾಲ್ನಡಿಯಲ್ಲಿ ತೆರಳಲು ಮುಂದಾದರು. ಇತ್ತ, ಸಾವಿರಾರು ಜನರು ಕೂಡ ಪವನ್ ಅವರೊಂದಿಗೆ ಸೇರಲು ಬರುತ್ತಿದ್ದರು. ಈ ವಿಷಯ ತಿಳಿದ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲೆಂದು ಮತ್ತೆ ವಾಹನಗಳನ್ನು ಬಿಟ್ಟರು. ಆಗ ಪವನ್ ಕಲ್ಯಾಣ್ ಕಾರಿನ ಟಾಪ್ ಮೇಲೆ ಕುಳಿತು ತೆರಳಿದರು.
Last Updated : Feb 3, 2023, 8:31 PM IST