ಸಿದ್ದರಾಮಯ್ಯರ ಟೀಕೆಗೆ ಯಾವುದೇ ಅರ್ಥವಿಲ್ಲ : ಮಾಜಿ ಸಿಎಂ ಜಗದೀಶ್ ಶೆಟ್ಟರ್ - ಯೋಗ ದಿನಾಚರಣೆ ಕುರಿತು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ
ಹುಬ್ಬಳ್ಳಿ: ಮೋದಿ ರಾಜ್ಯಕ್ಕೆ ಬಂದಿರುವುದಕ್ಕೂ ಆರೋಪ ಮಾಡ್ತಾರೆ. ಸಿದ್ದರಾಮಯ್ಯನವರ ಟೀಕೆಗೆ ಯಾವುದೇ ಅರ್ಥವಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಗರದಲ್ಲಿಂದು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಅವತ್ತು ಕೊರೊನಾ ಉಲ್ಬಣ ಆಗ್ತಿದ್ರು ಪಾದಯಾತ್ರೆ ಮಾಡಿದ್ರು. ಯೋಗ ಮಾಡುವುದರಿಂದ ಯಾರಿಗೂ ಕೊರೊನಾ ಬರೋದಿಲ್ಲ. ಎಲ್ಲರ ಆರೋಗ್ಯದ ದೃಷ್ಟಿಯಿಂದ ಯೋಗ ದಿನಾಚರಣೆ ಮಾಡಲಾಗ್ತಿದೆ. ಆದರೆ, ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರಿಗೆ ಆರೋಪ ಮಾಡುವುದನ್ನು ಬಿಟ್ಟು ಬೇರೆ ಕೆಲಸವಿಲ್ಲ. ಹೀಗಾಗಿ, ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
Last Updated : Feb 3, 2023, 8:24 PM IST