ಕರ್ನಾಟಕ

karnataka

ಚೇತನ್​ ಹಿರೇಕೆರೂರು ಮನೆಗೆ ಮಾಜಿ ಸಿಎಂ ಶೆಟ್ಟರ್ ಭೇಟಿ

ETV Bharat / videos

ಗೂಂಡಾ ಕಾಯ್ದೆ ಅಡಿ ಬಂಧಿತನಾದ ಚೇತನ್​ ಹಿರೇಕೆರೂರು ಮನೆಗೆ ಮಾಜಿ ಸಿಎಂ ಶೆಟ್ಟರ್ ಭೇಟಿ - Shettar visited to Chetana Hirekerur House

By

Published : Apr 21, 2023, 6:05 PM IST

ಹುಬ್ಬಳ್ಳಿ: ಚುನಾವಣೆ ಘೋಷಣೆಯಾಗುತ್ತಿದಂತೆ ಪೊಲೀಸರು ಅಕ್ರಮ ಚಟುವಟಿಕೆ ಹಾಗೂ ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿರುವವರನ್ನು ಹುಡುಕಿ ಹುಡುಕಿ ಗಡಿಪಾರು ಮಾಡುತ್ತಿದ್ದಾರೆ. ಅದರಂತೆ ಮೊನ್ನೆ ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್​ಗೆ ಸೇರ್ಪಡೆಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಭಾಗಿಯಾಗಿದ್ದ ಮಹಾನಗರ ಪಾಲಿಕೆ ಸದಸ್ಯ ಚೇತನ್​ ಹಿರೇಕೆರೂರು ಎಂಬವರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಇಂದು ಚೇತನ್​ ಹಿರೇಕೆರೂರು ಮನೆಗೆ ಮಾಜಿ ಸಿಎಂ ಶೆಟ್ಟರ್ ಭೇಟಿ ನೀಡಿ ಕುಟುಂಬದವರ ಅಳಲು ಆಲಿಸಿದರು. ಹುಬ್ಬಳ್ಳಿ ಕೋಟೆಲಿಂಗೇಶ್ವರ ನಗರದಲ್ಲಿರುವ ಚೇತನ್​ ಮನೆಗೆ ಭೇಟಿ ನೀಡಿ ಮನೆಯವರೊಂದಿಗೆ ಚರ್ಚಿಸಿದರು.

ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಕೆಯಲ್ಲಿ ಶೆಟ್ಟರ್ ಪಕ್ಕವೇ ಚೇತನ್​ ಹಿರೇಕೆರೂರು ಇದ್ದದ್ದನ್ನು ಗಮನಿಸಬಹುದು. ಆದರೆ, ನಿನ್ನೆ ಚೇತನ್​ ನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದಾರೆ‌. ತಮ್ಮ ಆಪ್ತ ಚೇತನ್​ ಬಂಧನವಾಗುತ್ತಲೇ ಚೇತನ್​ ಮನೆಗೆ ಶೆಟ್ಟರ್ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಚರ್ಚಿಸಿ ನಿಮ್ಮ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ.

ಇದನ್ನೂ ನೋಡಿ:ಸಿದ್ಧರಾಮಯ್ಯ ಅಭಿಮಾನಿಯಿಂದ ದೀಡ ನಮಸ್ಕಾರ: ವಿಡಿಯೋ.‌

ABOUT THE AUTHOR

...view details