ಕರ್ನಾಟಕ

karnataka

ಕಾಂಗ್ರೆಸ್​ಗೆ ಸೇರ್ಪಡೆಗೊಂಡ ಜಗದೀಶ್​ ಶೆಟ್ಟರ್​

ETV Bharat / videos

ಕಾಂಗ್ರೆಸ್​ ಸೇರಿದ ಜಗದೀಶ್​ ಶೆಟ್ಟರ್​: 150 ಸೀಟ್ ಪಕ್ಕಾ ಎಂದ ಮಲ್ಲಿಕಾರ್ಜುನ್​ ಖರ್ಗೆ!

By

Published : Apr 17, 2023, 8:04 PM IST

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಲೇ ಇವೆ. ಇಂದು ಬೆಳಗ್ಗೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಅವರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್​ ಸೇರಿದ್ದರೆ, ಇತ್ತೀಚೆಗಷ್ಟೇ ಮಾಜಿ ಡಿಸಿಎಂ ಲಕ್ಷ್ಮಣ್​ ಸವದಿ ಬಿಜೆಪಿ ತೊರೆದು ಕಾಂಗ್ರೆಸ್​ನಿಂದ ಅಥಣಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ಮೊನ್ನೆಯಷ್ಟೇ ಈ ಇಬ್ಬರು ನಾಯಕರ ರಾಜಕೀಯ ನಡೆಗೆ ಮಾಜಿ ಸಿಎಂ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಜೆಪಿಯಲ್ಲಿ ಎಲ್ಲ ಅಧಿಕಾರ ಅನುಭವಿಸಿ ಇದೀಗ ಕಾಂಗ್ರೆಸ್​ ಸೇರುತ್ತಿರುವುದು ಪಕ್ಷಕ್ಕೆ ದ್ರೋಹ ಮಾಡಿದಂತೆ ಎಂದು ಗುಡುಗಿದ್ದರು.

ಇತ್ತೀಚೆಗಷ್ಟೇ ಅಥಣಿ ಕ್ಷೇತ್ರದ ಟಿಕೆಟ್​ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡು ಮಾಜಿ ಡಿಸಿಎಂ ಲಕ್ಷ್ಮಣ್​ ಸವದಿ ಕಾಂಗ್ರೆಸ್​ ಸೇರುವ ಮೂಲಕ ಅಥಣಿಯಿಂದ ಕೈ ಹುರಿಯಾಳಾಗಿ ಆಯ್ಕೆ ಆಗಿದ್ರು. ಸವದಿ ಬೆನ್ನಲ್ಲೇ ಜಗದೀಶ್​ ಶೆಟ್ಟರ್​ ಕೂಡ ಬಿಜೆಪಿ ತೊರೆಯಲು ಸನ್ನದ್ಧರಾಗಿದ್ದರು. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕು ಎಂದು ಪಕ್ಷದ ಹೈಕಮಾಂಡ್​ ಹಲವು ಬಗೆಯ ಕಸರತ್ತು ನಡೆಸಿತು. ಯಾವುದಕ್ಕೂ ಬಗ್ಗದ ಶೆಟ್ಟರ್​ ಪಟ್ಟನ್ನು ಬಿಡದೇ ಭಾನುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಯೇ ಬಿಟ್ಟಿದ್ದರು. 

ಭಾನುವಾರ ರಾತ್ರಿ ಕಾಂಗ್ರೆಸ್​ ನಾಯಕರು ನಡೆಸಿದ ಮಾತುಕತೆ ಫಲಪ್ರದವಾದ ಬೆನ್ನಲ್ಲೇ ಸೋಮವಾರ ಬೆಳಗ್ಗೆ ಜಗದೀಶ್​ ಶೆಟ್ಟರ್​ ಕಾಂಗ್ರೆಸ್​ ಸೇರಿದ್ದಾರೆ.  ಕಾಂಗ್ರೆಸ್​ ಕಚೇರಿಯಲ್ಲಿ ಬಿ ಫಾರ್ಮ್​ ಕೂಡ ಪಡೆದು ಹುಬ್ಬಳ್ಳಿ - ಧಾರವಾಡ ಸೆಂಟ್ರಲ್​ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯೂ ಆಗಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಅವರು ತುರ್ತು ಮಾಧ್ಯಮಗೋಷ್ಠಿ ನಡೆಸಿ ಗರಂ ಆಗಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಶೆಟ್ಟರ್​​ ಸೇರ್ಪಡೆಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ:ಜಗದೀಶ್ ಶೆಟ್ಟರ್ ತಬ್ಬಿಕೊಂಡು ಕಣ್ಣೀರು ಸುರಿಸಿದ ಪತ್ನಿ- ವಿಡಿಯೋ

ABOUT THE AUTHOR

...view details