ಕರ್ನಾಟಕ

karnataka

ಜೆ ಸಿ ಮಾಧುಸ್ವಾಮಿ

ETV Bharat / videos

ರಿಸ್ಕ್ ತಗೊಂಡು ಚಿಕಿತ್ಸೆ ಮಾಡಿದರೆ ನಿಮ್ಮ ರಕ್ಷಣೆಗೆ‌ ಬಲವಾದ ಕಾನೂನು ತರುತ್ತೇನೆ: ಸಚಿವ ಮಾಧುಸ್ವಾಮಿ

By

Published : Feb 11, 2023, 8:40 PM IST

Updated : Feb 14, 2023, 11:34 AM IST

ತುಮಕೂರು:ಸರ್ಕಾರಿ ವೈದ್ಯರು ಪೋಸ್ಟ್ ಆಫೀಸ್ ತರ ಕೆಲಸ ಮಾಡುತಿದ್ದಾರೆ. ಯಾವುದೇ ಕೇಸ್ ಬಂದರೂ ಇಲ್ಲಿ ಆಗಲ್ಲ ಬೇರೆ ಆಸ್ಪತ್ರೆಗೆ ಹೋಗಿ ಎಂದು ಕೈ ತೊಳೆದುಕೊಳ್ಳುತ್ತಾರೆ. ಯಾವ ವೈದ್ಯರು ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ. ಯಾವುದೂ ಮಾಡದೇನೆ ರಕ್ಷಣೆ ಬೇಕು, ತಪ್ಪು ಮಾಡಿದಾಗ ಅಮಾನತು ಮಾಡಬಾರದು ಅಂದರೆ ಆಗಲ್ಲ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. 

ತುಮಕೂರಿನಲ್ಲಿ ನಡೆದ ಸರ್ಕಾರಿ ವೈದ್ಯರ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಅವರು, ಕರಾವಳಿ ಭಾಗದ ವೈದ್ಯರು ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಾರೆ. ದಕ್ಷಿಣ ಕನ್ನಡದ ವೈದ್ಯರು ರೋಗಿಗಳಿಗೆ ಕನಿಷ್ಠ ಎರಡು ನಿಮಿಷ ಆದರೂ ಕೌನ್ಸೆಲಿಂಗ್ ಮಾಡುತ್ತಾರೆ. ಆದರೆ, ಈ ಭಾಗದ ವೈದ್ಯರು ರೋಗಿಗಳನ್ನೇ ಮುಟ್ಟಲ್ಲ, ಇನ್ ಫೆಕ್ಸ್ನನ್‌ ಆಗುತ್ತದೆ ಎಂದು ಹೇಳಿ ಚರ್ಮನೂ ಮುಟ್ಟಲ್ಲ. ರೋಗಿಗಳಿಗೆ ಔಷಧಿಗಿಂತ ವೈದ್ಯರ ಒಳ್ಳೆ ಮಾತು ಮುಖ್ಯ ಎಂದರು.

ದೇವರು ವೈದ್ಯರಿಗೆ ವರ ಕೊಟ್ಟಿದ್ದಾರೆ. ಹಾಗಾಗಿ ಮಾನವೀಯತೆಯಿಂದ ಕೆಲಸ ಮಾಡಬೇಕು ಎಂದು ವೈದ್ಯರ ಸಮಾವೇಶದಲ್ಲೇ ವೈದ್ಯರ ವಿರುದ್ಧ ನಿಷ್ಠುರವಾಗಿ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿದರು.

ಇದನ್ನೂ ಓದಿ:ಮಂಗಳೂರಲ್ಲಿ ಅಮಿತ್ ಶಾ ರೋಡ್​ ಶೋ : ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದ ಸಚಿವರು

Last Updated : Feb 14, 2023, 11:34 AM IST

ABOUT THE AUTHOR

...view details