ಅಮರನಾಥ ಯಾತ್ರೆ ಭಕ್ತರಿಗೆ ಕೃತಕ ಆಮ್ಲಜನಕ ಒದಗಿಸಿದ ಐಟಿಬಿಪಿ ಸೈನಿಕರು! - ಅಮರನಾಥ ಯಾತ್ರೆ 2022
ಅಮರನಾಥ ಯಾತ್ರೆ 2022 ಜೂನ್ 30 ರಂದು ಪ್ರಾರಂಭವಾಗಿದ್ದು, ಈಗಾಗಲೇ 20 ದಿನಗಳು ಪೂರ್ಣಗೊಂಡಿವೆ. ಈ ಸಮಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಗುಫಾಗೆ ಭೇಟಿ ನೀಡಿದ್ದಾರೆ. ಹವಾಮಾನ ವೈಪರೀತ್ಯದ ನಡುವೆಯೂ ಯಾತ್ರಾರ್ಥಿಗಳು ಉತ್ಸಾಹ ತೋರುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಆಡಳಿತವು ಮೊದಲಿನಿಂದಲೂ ಯಾತ್ರಾರ್ಥಿಗಳ ಭದ್ರತೆ ಮತ್ತು ಆಹಾರಕ್ಕಾಗಿ ಹೇಗೆ ವ್ಯವಸ್ಥೆ ಮಾಡಿತ್ತು. ಅದೇ ರೀತಿಯ ವ್ಯವಸ್ಥೆಗಳು ಇಂದಿಗೂ ಕಂಡು ಬರುತ್ತವೆ. ಇನ್ನು ITBP ಸಿಬ್ಬಂದಿ ಅಮರನಾಥ ಯಾತ್ರೆ ಮಾರ್ಗದಲ್ಲಿ ಶೇಷನಾಗ್ ಬಳಿ ಯಾತ್ರಾರ್ಥಿಗಳಿಗೆ ಕೃತಕ ಆಮ್ಲಜನಕವನ್ನು ಒದಗಿಸುತ್ತಿದ್ದು, ಇಲ್ಲಿಯವರೆಗೆ ಸುಮಾರು 2,000 ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಸೈನಿಕರು ಕೃತಕ ಆಮ್ಲಜನಕವನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated : Feb 3, 2023, 8:25 PM IST