ಬಡವರ ಪರ ಇರುವ ಸರ್ಕಾರ ಬಂದಾಗ ಮಾತ್ರ ಅನುಕೂಲ ಆಗುತ್ತದೆ: ಶಾಸಕ ನರೇಂದ್ರ - etv bharat karnataka
ಚಾಮರಾಜನಗರ:1600 ರೂ. ಅಂತಾ ಒಬ್ಬರು ಸೀರೆ ಕೊಟ್ಟಿದ್ದರು ಅದೂ ಒಂದೂ ದಿನವೂ ಬಾಳಿಕೆ ಬರಲಿಲ್ಲ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ನಿಶಾಂತ್ ಹೆಸರು ಹೇಳದೇ ಪರೋಕ್ಷವಾಗಿ ಕಾಂಗ್ರೆಸ್ ಶಾಸಕ ನರೇಂದ್ರ ಟೀಕಿಸಿದರು. ಹನೂರು ತಾಲೂಕಿನ ದುಗ್ಗಟ್ಟಿ ಗ್ರಾಮದ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಿಂದ ಯಾರೋ ಧಣಿಗಳು ಬಂದು 1600 ರೂ. ಸೀರೆ ಕೊಟ್ಟಿದ್ದರು. ಅದು ಒಂದು ದಿನವೂ ಬಾಳಿಕೆ ಬರಲಿಲ್ಲ, ಒಗೆದ ಬಳಿಕ ಸೀರೆ ಟವೆಲ್ ಥರ ಆಯ್ತು ಎಂದು ವ್ಯಂಗ್ಯವಾಡಿದರು. ಬಡವರ ಪರ ಇರುವ ಸರ್ಕಾರ ಬಂದಾಗ ಮಾತ್ರ ಅನುಕೂಲ ಆಗುತ್ತದೆ. ಈಗಿನ ಬಿಜೆಪಿ ಸರ್ಕಾರ ಇಲ್ಲಿಯ ತನಕ ಒಂದೂ ಸಮುದಾಯ ಭವನವನ್ನೂ ಕೊಟ್ಟಿಲ್ಲ, ಒಡಕು ಮೂಡಿಸಿ ಅಧಿಕಾರ ಹಿಡಿಯುವುದು ಬ್ರಿಟಿಷರ ಕಾಲ, ಇಲ್ಲಿನ ಜನರಿಗೆ ಗೊತ್ತಿದೆ ಯಾರಿಗೆ ಮತ ಹಾಕಬೇಕೆಂದು ಎಂದು ಬಿಜೆಪಿ ವಿರುದ್ದ ನರೇಂದ್ರ ಕಿಡಿಕಾರಿದರು.
ಇದನ್ನೂ ಓದಿ:ಯಾರೋ ಬಾರ್ನಲ್ಲಿ ಹೊಡೆದಾಟ ಮಾಡಿಕೊಂಡಿದ್ದಕ್ಕೆ ರಾಜಕೀಯ ಬಣ್ಣ ಕೊಟ್ಟರೆ ಹೇಗೆ?: ಗೃಹ ಸಚಿವ ಆರಗ ಜ್ಞಾನೇಂದ್ರ