ಕರ್ನಾಟಕ

karnataka

ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್

ETV Bharat / videos

ಸಿಬಿಡಿಸಿಗಳಿಗೆ ಹೆಚ್ಚಿನ ಸಾಮರ್ಥ್ಯವಿದೆ ಎಂದು ಗುರುತಿಸಲಾಗಿದೆ: ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ - A meeting of central bank governors

By

Published : Jul 18, 2023, 7:56 PM IST

ನವದೆಹಲಿ:ಗಡಿಯಾಚೆಗಿನ ಪಾವತಿಗಳಿಗೆ ಸಂಬಂಧಿಸಿದಂತೆ, ತಡೆರಹಿತ ಗಡಿಯಾಚೆಗಿನ ಪಾವತಿಗಳನ್ನು ಸುಗಮಗೊಳಿಸಲು 'ಸಿಬಿಡಿಸಿ' ಗಳಿಗೆ (ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ) ಹೆಚ್ಚಿನ ಸಾಮರ್ಥ್ಯವಿದೆ ಎಂದು ಗುರುತಿಸಲಾಗಿದೆ ಮತ್ತು ಈ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯುವ ಅವಶ್ಯಕತೆಯಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಗುಜರಾತ್‌ನ ಗಾಂಧಿನಗರದಲ್ಲಿ 3 ನೇ G20 ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಮಾತನಾಡಿದ ಅವರು, ಗಡಿಯಾಚೆಗಿನ ಪಾವತಿಯನ್ನು ಇದೀಗ ಸಾಕಷ್ಟು ದೇಶಗಳು ಗುರುತಿಸಿವೆ. ಜಿ 20 ರಾಷ್ಟ್ರದ ಸದಸ್ಯರು ಹಾಗೂ ಇದಕ್ಕೆ ಸದಸ್ಯರಲ್ಲದ ದೇಶಗಳು ಇದನ್ನು ಒಪ್ಪಿವೆ ಎಂದು ಹೇಳಿದರು.

ಸಿಬಿಡಿಸಿಗಳಿಂದ ಉಂಟಾಗುವ ಸ್ಥೂಲ-ಹಣಕಾಸು ಸವಾಲುಗಳ ಮೇಲೆ ಐಎಂಎಫ್​ ಸಹ ಕಾರ್ಯನಿರ್ವಹಿಸುತ್ತಿದೆ. ಬಿಐಎಸ್​ ಕಾರ್ಯಗಳ ಬಗೆಗೆ ಚರ್ಚಿಸಲಾಗಿದೆ. ಮಾಹಿತಿ ಸಂಗ್ರಹಿಕೆ, ಅನುಭವಗಳ ಹಂಚಿಕೆ, ಡೇಟಾ ಸಂಗ್ರಹಣೆ ಮೊದಲಾದ ವಿಷಯಗಳನ್ನು ಗುರುತಿಸಲಾಗಿದೆ. ಅಲ್ಲದೇ ಸುಲಭವಾದ, ನಯವಾದ ಹಾಗೂ ತಡೆರಹಿತವಾದ ಪಾವತಿಯ ಬಗೆಗೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಹಾಗೆಯೇ ಸ್ಥೂಲ-ಹಣಕಾಸು ಸವಾಲುಗಳ ಬಗೆಗೆ ಐಎಂಎಫ್​ ಕೂಡಾ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಆರ್​ಬಿಐ ಹಣಕಾಸು ನೀತಿ ಸರಿಯಾದ ಹಾದಿಯಲ್ಲಿದೆ: ಗವರ್ನರ್ ಶಕ್ತಿಕಾಂತ ದಾಸ್

ABOUT THE AUTHOR

...view details