ಕರ್ನಾಟಕ

karnataka

ಹಾವಿನಿಂದ ಮಹಿಳೆ ಬಚಾವ್

ETV Bharat / videos

ಎಟಿಎಂಗೆ ನುಗ್ಗಿದ ಬುಸ್​ ಬುಸ್​ ನಾಗಪ್ಪ.. ಈ ಹಾವಿನಿಂದ ಮಹಿಳೆ ಬಚಾವ್ ಆಗಿದ್ದು ಹೇಗೆ? - A cobra entered the ATM

By

Published : Mar 30, 2023, 7:18 PM IST

ಇಡುಕ್ಕಿ (ಕೇರಳ):ಎಟಿಎಂ ಕೌಂಟರ್‌ಗಳಿಗೆ ನಿತ್ಯ ನೂರಾರು ಜನರು ಭೇಟಿ ನೀಡುತ್ತಾರೆ. ಹೀಗಾಗಿ, ಕೆಲವೆಡೆ ಎಟಿಎಂ ಕೌಂಟರ್‌ಗಳ ಮುಂದೆ ಉದ್ದನೆಯ ಸರತಿ ಸಾಲುಗಳು ಕಂಡುಬರುವುದು ಸಾಮಾನ್ಯ. ಆದರೆ, ನಿನ್ನೆ ಕೇರಳದ ಇಡುಕ್ಕಿ ಜಿಲ್ಲೆಯ ಕೂಟ್ಟಾರ್ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಟಿಎಂ‌ವೊಂದಕ್ಕೆ ನಾಗರಹಾವೊಂದು ನುಗ್ಗಿದ ಪರಿಣಾಮ ಸ್ಥಳೀಯರು ಬೆಚ್ಚಿಬಿದ್ದರು.

ಎಟಿಎಂಗೆ ನುಗ್ಗಿದ ನಾಗರಹಾವನ್ನು ಗಮನಿಸದೇ, ನಿನ್ನೆ ಸಂಜೆ ವೇಳೆ (29-03-23) ಎಟಿಎಂನಿಂದ ಹಣ ಡ್ರಾ ಮಾಡಲು ಮಹಿಳೆಯೊಬ್ಬರು ಬಂದಿದ್ದರು. ಆದರೆ, ಎಟಿಎಂ ಒಳಗೆ ಪ್ರವೇಶಿಸಿದಾಗ ಹಾವು ಅವರ ಕಣ್ಣಿಗೆ ಕಾಣಿಸಲಿಲ್ಲ.

ನಂತರ ಹಣ ತೆಗೆದಿಟ್ಟುಕೊಂಡು ಹಿಂತಿರುಗಲು ಮುಂದಾದಾಗ ಮಹಿಳೆಯು ಹಾವು ನೆಲದ ಮೇಲೆ ಇರುವುದು ಕಂಡಿದ್ದಾರೆ. ಕಿರುಚಾಡ ತೊಡಗಿದ ಮಹಿಳೆಯ ಶಬ್ಧ ಕೇಳಿದ ಜನರು ಆಕೆ ನೆರವಿಗೆ ಬಂದಿದ್ದಾರೆ. ಬಳಿಕ ಎಟಿಎಂ‌ನಿಂದ ಹೊರಗೆ ಓಡಿ ಬಂದರು. ಅದೃಷ್ಟವಶಾತ್ ಹಾವು ಕಚ್ಚದೇ ಮಹಿಳೆ ಬಚಾವ್​ ಆಗಿದ್ದಾರೆ. ಗೃಹಿಣಿಯನ್ನು ಸುರಕ್ಷಿತವಾಗಿ ಹೊರಕ್ಕೆ ಬಂದರು. ಬಳಿಕ ಎಟಿಎಂ ಸುತ್ತಮುತ್ತ ಜನರು ಜಮಾಯಿಸುತ್ತಿದ್ದಂತೆ ಹಾವು ಎಟಿಎಂ ಮಶಿನ್​ನ ಸಂದಿಯಲ್ಲಿ ಹೋಗಿದೆ.

ಸ್ಥಳೀಯರು ಎಟಿಎಂನೊಳಗೆ ವಿವಿಧ ಭಾಗಗಳನ್ನು ಕಿತ್ತಾಡಿದರೂ ಹುಡುಕಿದರೂ ಹಾವು ಮಾತ್ರ ಪತ್ತೆಯಾಗಿಲಿಲ್ಲ. ಬಳಿಕ ಅರಣ್ಯ ವಿಭಾಗದ ಕಚೇರಿಯಿಂದ ಅರಣ್ಯ ಇಲಾಖೆ ತಂಡ ಬಂದು ಸಾಕಷ್ಟು ಪ್ರಯತ್ನದ ಬಳಿಕ ನಾಗರಹಾವನ್ನು ಹಿಡಿದಿದ್ದಾರೆ. ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಹಾವನ್ನು ಹಿಡಿದು, ಇಂದು ಬೆಳಗ್ಗೆ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅದನ್ನು ಬಿಡಲಾಯಿತು.

 ಇದನ್ನೂ ಓದಿ:ರಾಮ ನವಮಿ: ಗ್ರಾಮೋತ್ಸವದ ವೇಳೆ ಪಟಾಕಿಯ ಕಿಡಿ ಬಿದ್ದು ಪೆಂಡಾಲ್ ಸುಟ್ಟು ಭಸ್ಮ

ABOUT THE AUTHOR

...view details