ಏಳು ದೊಡ್ಡ ಧರ್ಮಗಳು, 3500 ಜಾತಿ, 19 ಸಾವಿರ ಭಾಷೆ ಇರುವ ದೇಶ ನಮ್ಮದು: ಬಿ.ಕೆ. ಹರಿಪ್ರಸಾದ್
ಚಿಕ್ಕಮಗಳೂರು :ಏಳು ದೊಡ್ಡ ಧರ್ಮಗಳು, 3500 ಜಾತಿಗಳು ಮತ್ತು 19 ಸಾವಿರ ಭಾಷೆ ಇರುವ ದೇಶ ಇದು. ಸಂವಿಧಾನದ ಚೌಕಟ್ಟಿನಲ್ಲಿ ಬ್ರಾಹ್ಮಣ ಅಥವಾ ದಲಿತ ಯಾರು ಬೇಕಾದರೂ ಸಿಎಂ ಆಗಬಹುದು ಎಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
ಸಂವಿಧಾನದಲ್ಲಿ ಹಿರಿಯರು ಎಲ್ಲದಕ್ಕೂ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ, ಬ್ರಾಹ್ಮಣ ಸಿಎಂ ಎನ್ನುವ ವಿಚಾರ ದೊಡ್ಡದೇನು ಅಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ ಕೊರೊನಾ ಸಂದರ್ಭದಲ್ಲಿ ಬರಲಿಲ್ಲ. ಕೊಡಗು, ಚಿಕ್ಕಮಗಳೂರು, ಉತ್ತರ ಕರ್ನಾಟಕದಲ್ಲಿ ನೆರೆ ಬಂದಾಗ ಬರಲಿಲ್ಲ. ಕನಿಷ್ಠ ಒಂದು ವೈಮಾನಿಕ ಸಮೀಕ್ಷೆ ಕೂಡ ಮಾಡಲಿಲ್ಲ. ಈಗ ಪ್ರವಾಸೋದ್ಯಮ ರಾಜಕೀಯಕ್ಕೆ ಅಷ್ಟೇ ಬರುತ್ತಿರೋದು, ಬೇರೇನಕ್ಕೂ ಅಲ್ಲ. ಕುಂಕುಮ ಇಟ್ಟ ತಕ್ಷಣ ಹಿಂದೂ ಆಗಲ್ಲ. ಹಿಂದುತ್ವದ ಬಗ್ಗೆ ಮಾತನಾಡೋರು ಮೊದಲು ಹಿಂದುತ್ವ ಅಂದ್ರೆ ಏನೆಂದು ತಿಳಿದುಕೊಳ್ಳಬೇಕು ಎಂದು ಬಿ.ಕೆ. ಹರಿಪ್ರಸಾದ್ ಟಾಂಗ್ ಕೊಟ್ಟರು.
ಇದನ್ನೂ ಓದಿ :'ಬಿಜೆಪಿಯವರದ್ದು ಲಂಚ, ಮಂಚದ ಸರ್ಕಾರ': ಪ್ರಜಾಧ್ವನಿ ಸಮಾವೇಶದಲ್ಲಿ ಕೈ ನಾಯಕರ ವಾಗ್ದಾಳಿ