ಪಕ್ಷಿಗಳ ರಕ್ಷಣೆಗೆ ನಿರ್ಮಾಣವಾಯ್ತು ಶಿವನ ಮೂರನೇ ಕಣ್ಣಿನ ಆಕಾರದ ದ್ವೀಪ - Mahakal Lok temple
ಉಜ್ಜಯಿನಿ (ಮಧ್ಯಪ್ರದೇಶ): ಮಹಾಕಾಲ ಲೋಕ್ ದೇವಸ್ಥಾನ ಬಳಿಯ ರುದ್ರಸಾಗರ ಸರೋವರ ಮಧ್ಯದಲ್ಲಿ ಶಿವನ ಮೂರನೇ ಕಣ್ಣಿನ ಆಕಾರದ ದ್ವೀಪವನ್ನು ರಚಿಸಲಾಗಿದೆ. ಇದು ಸುಮಾರು 856 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಹೊಸದಾಗಿ ಅಭಿವೃದ್ಧಿಪಡಿಸಲಾದ ಮಹಾಕಾಲ ಕಾರಿಡಾರ್ ಯೋಜನೆಯ ಭಾಗವಾಗಿದೆ. ಶಿವನ ಮೂರನೇ ಕಣ್ಣಿನ ಆಕಾರದ ದ್ವೀಪದ ವೈಮಾನಿಕ ನೋಟವು ಎಲ್ಲರನ್ನೂ ಮೋಡಿ ಮಾಡುವಂತಿದೆ. ಇಲ್ಲಿ ಸಾವಿರಾರು ಪಕ್ಷಿಗಳು ಬಂದು ಸೇರುವುದರಿಂದ ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಈ ದ್ವೀಪ ರಚಿಸಲಾಗಿದೆ. ರುದ್ರಸಾಗರವನ್ನು ಪುನರುಜ್ಜೀವನಗೊಳಿಸಲು ಮತ್ತು ಸುಂದರಗೊಳಿಸಲು ಒಂಬತ್ತು ತಿಂಗಳುಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಎಲ್ಲ ಪರಿಸರ ಕಾಳಜಿಗಳನ್ನು ಸಹ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಹೇಳಿದರು. ಮಹಾಕಾಲ ಲೋಕ್ ದೇವಾಲಯವು ದೇಶಾದ್ಯಂತದ ಭಕ್ತರು ಭೇಟಿ ನೀಡುವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.
Last Updated : Feb 3, 2023, 8:32 PM IST