ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳೇ ಇಲ್ಲ, ಬಿಜೆಪಿಗರನ್ನು ಕರೆದು ಟಿಕೆಟ್ ಕೊಡ್ತೀವಿ ಅಂತಿದ್ದಾರೆ: ಯತ್ನಾಳ್
ಚಿಕ್ಕೋಡಿ:ಕಾಂಗ್ರೆಸ್ ನಾಯಕರು ಹತಾಶೆಗೊಂಡಿದ್ದಾರೆ. ಹೀಗಾಗಿ, ಡಿ.ಕೆ.ಶಿವಕುಮಾರ್ ಬಿಜೆಪಿ ಶಾಸಕರಿಗೆ ಕರೆ ಮಾಡಿ ತಮ್ಮ ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ. ಮೊದಲಿನಿಂದಲೂ ಅವರದ್ದು ಅದೇ ದಂಧೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ಚಿಕ್ಕೋಡಿಯಲ್ಲಿಂದು ಎಂಟು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಭೆಗೆ ಆಗಮಿಸಿದ್ದಾಗ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ ಬಿಜೆಪಿಯವರನ್ನು ಕರೆದು ಟಿಕೆಟ್ ಕೊಡ್ತೀವಿ ಅಂತಿದ್ದಾರೆ. ಈ ಸಲ ನೂರಕ್ಕೆ ನೂರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಲವು ನಾಯಕರು ಪಕ್ಷ ಬಿಡುವ ವಿಚಾರ: ಬಿಜೆಪಿ ಪಕ್ಷದಿಂದ ಯಾರೂ ಬಿಟ್ಟು ಹೋಗೋದಿಲ್ಲ ಎಂದರು. ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯ ಬಿಜೆಪಿಯಲ್ಲಿ ವೋಟಿಂಗ್ ವ್ಯವಸ್ಥೆಯ ಪ್ರಾಯೋಗಿಕ ಪರಿಚಯ ಮಾಡಲಾಗಿದೆ ಎಂದು ತಿಳಿಸಿದರು. ಬಿಜೆಪಿಯಲ್ಲಿ ಯಾರ ಹಠವೂ ನಡೆಯೋದಿಲ್ಲ. ಪಕ್ಷದ ಸಾಮಾಜಿಕ ವ್ಯವಸ್ಥೆಯೊಳಗೆ ಅವರ ಸಮಾಜ ಇದ್ದಲ್ಲಿ ಸಮರ್ಥ ಅಭ್ಯರ್ಥಿ ಬಗ್ಗೆ ಸಮಾಲೋಚಿಸಿ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಹೇಳಿದರು.
ಇದನ್ನೂಓದಿ:ಬಿಜೆಪಿ ತೊರೆಯಲ್ಲ, ಕಾಂಗ್ರೆಸ್ ಸೇರಲ್ಲ: ಕೈ ಆಹ್ವಾನ ತಳ್ಳಿಹಾಕಿದ ಸಚಿವ ಬೈರತಿ ಬಸವರಾಜ್