ಅಂತಾರಾಷ್ಟ್ರೀಯ ಪುರುಷರ ದಿನ: 20 ಅಡಿ ಉದ್ದದ ಮೀಸೆ ರಚಿಸಿ ಗಮನಸೆಳೆದ ಮರಳು ಕಲಾವಿದ ಪಟ್ನಾಯಕ್ - ವಿಶ್ವದೆಲ್ಲೆಡೆ ಈ ದಿನವನ್ನು ಆಚರಿಸಲಾಗುತ್ತಿದೆ
ಇಂದು ನವೆಂಬರ್ 19 ಅಂತಾರಾಷ್ಟ್ರೀಯ ಪುರುಷರ ದಿನ. ವಿಶ್ವದೆಲ್ಲೆಡೆ ಈ ದಿನವನ್ನು ಆಚರಿಸಲಾಗುತ್ತಿದೆ. ಈ ಸಲುವಾಗಿ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಬೀಚ್‌ನಲ್ಲಿ ಮಣ್ಣಿನ ಚಹಾ ಕಪ್‌ಗಳೊಂದಿಗೆ ಮರಳಿನಿಂದ 20 ಅಡಿ ಉದ್ದದ ಮೀಸೆಯನ್ನು ಬಿಡಿಸಿದ್ದಾರೆ. ಬಿಡಿಸಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು , " ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯ ಶುಭಾಶಯಗಳು! ಒಡಿಶಾದ ಪುರಿ ಬೀಚ್‌ನಲ್ಲಿ ಮಣ್ಣಿನ ಚಹಾ ಕಪ್‌ಗಳೊಂದಿಗೆ, 20 ಅಡಿ ಉದ್ದದ ಮೀಸೆಯ ನನ್ನ ಮರಳು ಕಲೆಯನ್ನು ಸ್ಥಾಪಿಸಿದ್ದೇನೆ " ಎಂದು ಟ್ವೀಟ್ ಮಾಡಿದ್ದಾರೆ. ಪುರುಷ ಆರೋಗ್ಯ, ತಾರತಮ್ಯ ಮತ್ತು ಲಿಂಗ ಸಂಬಂಧಗಳ ಜಾಗೃತಿಯನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸುವುದೇ ಅಂತಾರಾಷ್ಟ್ರೀಯ ಪುರುಷರ ದಿನದ ಉದ್ದೇಶವಾಗಿದೆ.
Last Updated : Feb 3, 2023, 8:33 PM IST