ಕೆರೆಯಲ್ಲಿ ಜಾರಿ ಬಿದ್ದ ಸೈಕಲ್ನಲ್ಲಿ ಹೋಗುತ್ತಿದ್ದ ಬಾಲಕ: ಸಹಾಯಕ್ಕೆ ಧಾವಿಸಿದ ರಿಕ್ಷಾ ಚಾಲಕ; ವಿಡಿಯೋ - ಚಾಲಕನ ಜೀವ ಕಾಪಾಡಿದ ರಿಕ್ಷಾ ಚಾಲಕ
ಉತ್ತರಾಖಂಡ: ಹರಿದ್ವಾರದ ರೂರ್ಕಿಯ ಬಹದ್ರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತರ್ಶಾ ಗ್ರಾಮದ ಬಳಿ ಸೈಕಲ್ನಲ್ಲಿ ಹೋಗುತ್ತಿದ್ದ ಬಾಲಕನೊಬ್ಬ ಆಯತಪ್ಪಿ ಕೆರೆಗೆ ಬಿದ್ದಿದ್ದು, ಕೂಡಲೇ ರಿಕ್ಷಾ ಚಾಲಕ ಮಗುವಿನ ಸಹಾಯಕ್ಕೆ ಧಾವಿಸಿ, ಕೊಳದಿಂದ ಹೊರತೆಗೆದ ಘಟನೆ ನಡೆದಿದೆ. ಕೆರೆಗೆ ಬಿದ್ದ ತಕ್ಷಣ ಬಾಲಕ ಮುಳುಗಲು ಪ್ರಾರಂಭಿಸಿದ್ದು, ಜೋರಾಗಿ ಕೂಗಾಡಿದ್ದಾನೆ. ಅಲ್ಲೇ ರಸ್ತೆ ಮೇಲೆ ಹೋಗುತ್ತಿದ್ದ ರಿಕ್ಷಾ ಚಾಲಕ ಬಾಲಕನ ಧ್ವನಿ ಕೇಳಿಸಿಕೊಂಡು ಆತನ ಜೀವ ಕಾಪಾಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಗುವಿನ ಕುಟುಂಬಸ್ಥರು ರಿಕ್ಷಾ ಚಾಲಕನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Last Updated : Feb 3, 2023, 8:30 PM IST