4 ಯುವತಿಯರಿಂದ ಮಹಿಳೆಗೆ ಥಳಿತ: ವಿಡಿಯೋ ವೈರಲ್
ಇಂದೋರ್: ಎಂಐಜಿ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್‌ಐಜಿ ತಿರಾಹೆಯಲ್ಲಿ ಮಹಿಳೆಯೊಬ್ಬರಿಗೆ ನಾಲ್ವರು ಹುಡುಗಿಯರು ತೀವ್ರವಾಗಿ ಥಳಿಸಿದ್ದು, ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವತಿಯರು ಮಹಿಳೆಗೆ ಥಳಿಸುತ್ತಿರುವಾಗ ಅಲ್ಲಿ ಸೇರಿದ ಜನ ಘಟನೆಯನ್ನು ನೋಡುತ್ತಿದ್ದರೆ ಹೊರತು, ಯಾರೊಬ್ಬರು ಮಹಿಳೆಯನ್ನು ಇದರಿಂದ ಪಾರು ಮಾಡಲು ಮಧ್ಯಪ್ರವೇಶಿಸದೇ ಇರುವುದು ವೈರಲ್ ಆದ ವಿಡಿಯೋದಲ್ಲಿ ಸೆರೆ ಆಗಿದೆ. ಸದ್ಯ, "ಇಡೀ ಪ್ರಕರಣದ ತನಿಖೆಯಲ್ಲಿ ಪ್ರಕರಣವು 3 ದಿನಗಳ ಹಿಂದಿನದು ಎಂದು ಕಂಡು ಬಂದಿದೆ, ಘಟನೆಯ ನಂತರ ಎಲ್ಲ ಆರೋಪಿ ಹುಡುಗಿಯರು ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಟೀನಾ, ಮೇಘಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮತ್ತು ಉಳಿದ ಇಬ್ಬರು ಯುವತಿಯರ ಹುಡುಕಾಟ ನಡೆಯುತ್ತಿದೆ" ಎಂದು ಎಂಇಜಿ ಪೋಲಿಸ್ ಠಾಣೆಯ ಅಧಿಕಾರಿ ಅಜಯ್ ವರ್ಮಾ ಹೇಳಿದ್ದಾರೆ.
Last Updated : Feb 3, 2023, 8:31 PM IST