ಕರ್ನಾಟಕ

karnataka

ಅರಬ್ಬಿ ಸಮುದ್ರದಲ್ಲಿ ದೇಶದ ಪ್ರತಿಷ್ಠಿತ ನೌಕೆಗಳ ತಾಲೀಮು : ಉಪಗ್ರಹದಲ್ಲೂ ಸೆರೆಯಾದ ಚಿತ್ರ!

ETV Bharat / videos

ಅರಬ್ಬಿ ಸಮುದ್ರದಲ್ಲಿ ದೇಶದ ಪ್ರತಿಷ್ಠಿತ ನೌಕೆಗಳ ತಾಲೀಮು : ಉಪಗ್ರಹದಲ್ಲೂ ಸೆರೆಯಾದ ಚಿತ್ರ

By

Published : Jun 10, 2023, 11:01 PM IST

ಕಾರವಾರ : ಭಾರತೀಯ ನೌಕಾಸೇನೆಯ ಎರಡು ವಿಮಾನವಾಹಕ ನೌಕೆಗಳು ಅರಬ್ಬಿ ಸಮುದ್ರದಲ್ಲಿ ತಾಲೀಮು ನಡೆಸಿದ್ದು, ಈ ಚಿತ್ರಗಳನ್ನು ಇಂಡಿಯನ್ ಡಿಫೆನ್ಸ್ ರಿಸರ್ಚ್ ವಿಂಗ್(ಐಡಿಆರ್‌ಡಬ್ಲು) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ. ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಸೇನೆಯ ಪ್ರಮುಖ ವಿಮಾನವಾಹಕ ನೌಕೆಗಳಾದ ಐಎನ್‌ಎಸ್ ವಿಕ್ರಮಾದಿತ್ಯ ಹಾಗೂ ಐಎನ್‌ಎಸ್ ವಿಕ್ರಾಂತ್ ನೌಕೆಗಳು 35 ಯುದ್ಧ ವಿಮಾನ ಹಾಗೂ 10ಕ್ಕೂ ಹೆಚ್ಚು ನೌಕೆಗಳ ಜತೆ ಸೇರಿ ಜೂನ್ 3ರಂದು ತಾಲೀಮು ನಡೆಸಿವೆ. ಈ ಬಗ್ಗೆ ಭಾರತೀಯ ನೌಕಾಸೇನೆ ಶನಿವಾರ ಅಪರೂಪದ ಸನ್ನಿವೇಶದ ಫೋಟೋ ಹಾಗೂ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 

ಅಲ್ಲದೆ ಉಪಗ್ರಹ ಆಧಾರಿತ ಚಿತ್ರಗಳನ್ನು ಸೆರೆ ಹಿಡಿದಿರುವ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಚಿತ್ರ ಹಾಗೂ ವಿವರವನ್ನು ಹಂಚಿಕೊಂಡಿದೆ. ಪಶ್ಚಿಮ ನೌಕಾ ವಲಯ ಎರಡು ನೌಕೆಗಳು ಯುದ್ಧ ಸನ್ನದ್ಧವಾಗಿರುವ ಬಗ್ಗೆ ಪರಿಶೀಲನೆ ನಡೆಸಿತು ಎಂದು ಐಡಿಆರ್‌ಡಬ್ಲು ತಿಳಿಸಿದೆ. ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯು ಕಾರವಾರದಲ್ಲಿ ನೆಲೆ ನಿಂತಿದ್ದರೆ, ಭಾರತೀಯ ತಂತ್ರಜ್ಞಾನದ ಮೂಲಕ ಸಿದ್ಧಪಡಿಸಲಾದ ವಿಕ್ರಾಂತ ನೌಕೆಯು ಕೊಚ್ಚಿಯಲ್ಲಿ ನೆಲೆ ನಿಂತಿದೆ. ಎರಡು ನೌಕೆಗಳು ಮೊದಲ ಬಾರಿಗೆ ಕಡಲಿಗಿಳಿದಿದ್ದು, ಇದೀಗ ದೇಶವೇ ಹೆಮ್ಮೆಪಡುವ ಕ್ಷಣಕ್ಕೆ ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ನಡೆದ ತಾಲೀಮಿನ ಚಿತ್ರಗಳು ಸಾಕ್ಷಿಯಾಗಿವೆ.

ಇದನ್ನೂ ಓದಿ :ಅಂಜನಾದ್ರಿ ಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಕಿಷ್ಕಿಂಧಾ ಯುವ ಚಾರಣ ಬಳಗ: ವಿಡಿಯೋ

ABOUT THE AUTHOR

...view details