ಕರ್ನಾಟಕ

karnataka

ನೋಟು ನಾಣ್ಯಗಳಿಂದಲೇ ಗಣಪನಿಗೆ ವಿಶೇಷ ಅಲಂಕಾರ

ETV Bharat / videos

₹2.5 ಕೋಟಿ ಮೌಲ್ಯದ ನೋಟು, ₹56 ಲಕ್ಷ ಮೌಲ್ಯದ ನಾಣ್ಯಗಳಿಂದ ಗಣಪತಿ ದೇಗುಲ ಅಲಂಕಾರ!- ನೋಡಿ

By ETV Bharat Karnataka Team

Published : Sep 18, 2023, 2:00 PM IST

ಬೆಂಗಳೂರು: ನಗರದಲ್ಲಿ ಗಣೇಶ ಚುತುರ್ಥಿಯ ಪ್ರಯುಕ್ತ ವಿಭಿನ್ನ ರೀತಿಯ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ-ಪುನಸ್ಕಾರಗಳನ್ನು ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ, ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ಕೋಟಿ ಕೋಟಿ ಮೌಲ್ಯದ ನೋಟು ಮತ್ತು ನಾಣ್ಯಗಳಿಂದ ದೇವಸ್ಥಾನವನ್ನು ಅಲಂಕರಿಸಿ ಮೋದಕಪ್ರಿಯನನ್ನು ಆರಾಧಿಸುತ್ತಿರುವುದು ಜನರ ಗಮನ ಸೆಳೆಯುತ್ತಿದೆ.

ಪ್ರತಿ ಬಾರಿ ವಿಶೇಷ ಅನುಭವ ನೀಡುವ ಹೊಸ ರೀತಿಯಲ್ಲಿ ಭಕ್ತರಿಗೆ ಪೂಜೆಗೆ ಅವಕಾಶ ನೀಡಬೇಕು ಎಂಬ ಉದ್ದೇಶ ಹೊಂದಿರುವ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ ಈ ಸಲ ಸಾಕಷ್ಟು ವಿಭಿನ್ನವಾದ ಅಲಂಕಾರ ಮಾಡಿದೆ. ಸುಮಾರು 56 ಲಕ್ಷ ಮೌಲ್ಯದ 5, 10 ಮತ್ತು 20 ರೂಪಾಯಿ ನಾಣ್ಯಗಳು ಮತ್ತು 10, 20, 50, 100, 200 ಮತ್ತು 500 ರೂಪಾಯಿಗಳ ನೋಟುಗಳೊಂದಿಗೆ ಹೂವಿನಂತೆ ಮಾಲೆಗಳನ್ನು ಮಾಡಿ ಅತ್ಯಾಕರ್ಷಕವಾಗಿ ಅಲಂಕಾರ ಮಾಡಿದ್ದಾರೆ.

ಟ್ರಸ್ಟಿ ರಾಮ್‌ ಮೋಹನ್‌ ರಾಜು ಮಾತನಾಡಿ, "ಇಲ್ಲಿ ಸುಮಾರು 2.5 ಕೋಟಿ ರೂ ಮೌಲ್ಯದ ನೋಟು ಮತ್ತು 56 ಲಕ್ಷ ರೂ ಮೌಲ್ಯದ ನಾಣ್ಯಗಳ ಮೂಲಕ ಅಲಂಕಾರ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ 150 ಜನ ಕೆಲಸದಲ್ಲಿ ತೊಡಗಿದ್ದರು. ಯಾವುದೇ ಸಮಸ್ಯೆ ಆಗದಂತೆ ಸೆಕ್ಯೂರಿಟಿ ಮತ್ತು ಇಡೀ ದೇವಾಲಯದಲ್ಲಿ ಸಿಸಿಟಿವಿ ಅಳವಡಿಸಿದ್ದೇವೆ. ನಾಣ್ಯಗಳಿಂದಲೇ ಗಣೇಶನ ಫೋಟೋ, ಜೈ ಕರ್ನಾಟಕ, ನೇಷನ್‌ ಫರ್ಸ್ಟ್‌, ವಿಕ್ರಮ್‌ ಲ್ಯಾಂಡರ್‌, ಚಂದ್ರಯಾನದ ಚಿತ್ರಗಳು ಮತ್ತು ಜೈ ಜವಾನ್‌ ಜೈ ಕಿಸಾನ್‌ ಚಿತ್ರಗಳನ್ನು ರಚಿಸಲಾಗಿದೆ. ಭಕ್ತರು ಬಹಳ ಸಂತಸಗೊಂಡಿದ್ದಾರೆ" ಎಂದರು. 

"ಈ ಅಲಂಕಾರ ಇನ್ನೂ ಒಂದು ವಾರಗಳ ಕಾಲ ಇರಲಿದೆ. ಭಕ್ತರು ಯಾವುದೇ ದಿನಗಳಲ್ಲಿ ಬಂದು ದರುಶನ ಪಡೆಯಬಹುದು" ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ನೋಡಿ :ಬೆಳಗಾವಿ: ರುದ್ರಾಕ್ಷಿ ಗಣಪ ನಿರ್ಮಿಸಿ ಪರಿಸರ ಜಾಗೃತಿ ಸಂದೇಶ

ABOUT THE AUTHOR

...view details