ದೇಶದ ಗಡಿ ದಾಟುತ್ತಿದ್ದ ಅಫ್ಘಾನಿ ಪ್ರಜೆಯನ್ನು ಬಂಧಿಸಿದ ಭಾರತೀಯ ಸೇನೆ - ವೈಟೆಕ್ ನೈಟ್ ಕಾರ್ಪ್ಸ್ ಜವಾನರು
ಶ್ರೀನಗರ( ಜಮ್ಮು ಕಾಶ್ಮೀರ): ಅಫ್ಘಾನಿ ಪ್ರಜೆಯೊಬ್ಬನನ್ನು ನಮ್ಮ ದೇಶದ ಗಡಿ ದಾಟುತ್ತಿದ್ದ ವೇಳೆ ಭಾರತದ ಸೇನೆ ಬಂಧಿಸಿದೆ. ಬಹಳ ಸಮಯದ ನಂತರ ಅಫ್ಘಾನಿ ಪ್ರಜೆಯೊಬ್ಬನನ್ನು ಭಾರತ ಸೇನೆ ಬಂಧಿಸಿದ್ದು, ಬಂಧಿತನನ್ನು ಕಾಬೂಲ್ನ ಅಬ್ದುಲ್ ವಾಹಿದ್ ಎಂದು ಗುರುತಿಸಲಾಗಿದೆ. ವೈಟೆಕ್ ನೈಟ್ ಕಾರ್ಪ್ಸ್ ಜವಾನರು ಆತನನ್ನು ಹಿಡಿದು, ಹೆಚ್ಚಿನ ವಿಚಾರಣೆಗಾಗಿ ಪೂಂಚ್ನ ಮೆಂಧರ್ ವಿಭಾಗದ ಬಲಾಕೋಟ್ ಸೆಕ್ಟರ್ನಲ್ಲಿ ಜಮ್ಮು ಕಾಶ್ಮೀರ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.
ಗಡಿಯಲ್ಲಿ ಉಗ್ರರನ್ನು ಹೊಡೆದುರುಳಿಸಿದ್ದ ಭಾರತೀಯ ಸೇನೆ:ಭಾರತದ ಗಡಿ ಪ್ರವೇಶಿಸುತ್ತಿರುವ ಉಗ್ರರನ್ನು ಮಟ್ಟ ಹಾಕಲು ಭಾರತೀಯ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದು, ಇತ್ತೀಚೆಗೆ ದೇಶದ ಗಡಿಯೊಳಗೆ ನುಸುಳುತ್ತಿದ್ದ ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿತ್ತು. ಈ ಕಾರ್ಯಾಚರಣೆಯಲ್ಲಿ ಒಟ್ಟು 7 ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು. ದೆಗ್ವಾರ್ ಸೆಕ್ಟರ್ನಲ್ಲಿ ಭಯೋತ್ಪಾದಕರ ಚಲನವಲನ ಗಮನಿಸಿದಾಗ ಭಾರತದ ಒಳನುಸುಳುವ ಪ್ರಯತ್ನ ಕಂಡು ಬಂದಿತ್ತು. ತಕ್ಷಣ ಎಚ್ಚೆತ್ತುಕೊಂಡ ಭಾರತೀಯ ಸೇನೆ ಸ್ಥಳೀಯ ಪೊಲೀಸರು ಜೊತೆ ಕಾರ್ಯಾಚರಣೆ ನಡೆಸಿ, ಉಗ್ರರನ್ನು ಹೊಡೆದುರುಳಿಸಿತ್ತು.
ಇದನ್ನೂ ಓದಿ:ಬಿಎಸ್‌ಎಫ್ - ಪೊಲೀಸ್ ಜಂಟಿ ಶೋಧ: ಪಂಜಾಬ್ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಡ್ರೋನ್ ವಶಕ್ಕೆ