ಕರ್ನಾಟಕ

karnataka

ಭಾರತ ಮತ್ತು ಯುಕೆ ಸೇನೆಗಳಿಂದ ಯುದ್ಧತಂತ್ರದ ಕಸರತ್ತು

ETV Bharat / videos

'ಅಜೇಯ ವಾರಿಯರ್ 2023': ಭಾರತ ಮತ್ತು ಯುಕೆ ಸೇನೆಗಳಿಂದ ಯುದ್ಧತಂತ್ರದ ಕಸರತ್ತು - Chowbati of Uttarakhand

By

Published : May 1, 2023, 6:12 PM IST

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಡೆಯುತ್ತಿರುವ ದ್ವಿಪಕ್ಷೀಯ ತಾಲೀಮು 'ಅಜೇಯ ವಾರಿಯರ್ 2023' ರ ಐದನೇ ದಿನದಂದು ಭಾರತೀಯ ಸೇನೆ ಮತ್ತು ಬ್ರಿಟಿಷ್ ಸೇನಾ ಪಡೆಗಳು ವಿವಿಧ ಯುದ್ಧತಂತ್ರದ ಕಸರತ್ತುಗಳ ಕುರಿತು ಜಂಟಿ ತರಬೇತಿಯನ್ನು ನಡೆಸಿದವು. ಭಾರತೀಯ ಸೇನೆಯು ಪ್ರಸ್ತುತ 7ನೇ ಆವೃತ್ತಿಯ ಜಂಟಿ ಮಿಲಿಟರಿ ತಾಲೀಮು “ಅಜೇಯ ವಾರಿಯರ್-23” ಅನ್ನು ಬ್ರಿಟಿಷ್ ಸೇನೆಯೊಂದಿಗೆ ಯುಕೆಯ ಸಾಲಿಸ್‌ಬರಿ ಬಯಲಿನಲ್ಲಿ ನಡೆಸುತ್ತಿದೆ. ದ್ವೈವಾರ್ಷಿಕ ವ್ಯಾಯಾಮ ಗುರುವಾರ ಆರಂಭಗೊಂಡಿದ್ದು, ಮೇ 11ರವರೆಗೆ ನಡೆಯಲಿದೆ.

ಯುಕೆಯ 2 ರಾಯಲ್ ಗೂರ್ಖಾ ರೈಫಲ್ಸ್‌ನ ಸೈನಿಕರು ಮತ್ತು ಬಿಹಾರ ರೆಜಿಮೆಂಟ್‌ನ ಭಾರತೀಯ ಸೇನೆಯ ಸೈನಿಕರು ಸಮರಾಭ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ. ಭಾರತೀಯ ಸೇನಾ ತುಕಡಿಯು ಸ್ವದೇಶಿ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳೊಂದಿಗೆ ವಾಯುಪಡೆಯ C-17 ವಿಮಾನದ ಮೂಲಕ ಏಪ್ರಿಲ್ 26 ರಂದು ಇಂಗ್ಲೆಂಡ್‌ನ ಬ್ರೈಜ್ ನಾರ್ಟನ್‌ಗೆ ಆಗಮಿಸಿತು.

ವಿಡಿಯೋದಲ್ಲಿ ಭಾರತೀಯ ಸೈನಿಕರು ಮತ್ತು ಬ್ರಿಟಿಷ್ ಪಡೆಗಳು ವಿವಿಧ ಯುದ್ಧತಂತ್ರದ ಡ್ರಿಲ್‌ಗಳಲ್ಲಿ ಜಂಟಿ ತರಬೇತಿಯನ್ನು ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ರಕ್ಷಣಾ ಸಚಿವಾಲಯದ ಪ್ರಕಾರ, ಈ ವ್ಯಾಯಾಮದ ಪ್ರಾಥಮಿಕ ಗುರಿಯು ಸಕಾರಾತ್ಮಕ ಮಿಲಿಟರಿ ಸಂಬಂಧಗಳನ್ನು ನಿರ್ಮಿಸುವುದು, ಪರಸ್ಪರ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮತ್ತು ನಗರ ಮತ್ತು ಅರೆ-ನಗರ ಪರಿಸರದಲ್ಲಿ ಕಂಪನಿ ಮಟ್ಟದ ಉಪ-ಸಾಂಪ್ರದಾಯಿಕ ಕಾರ್ಯಾಚರಣೆಗಳನ್ನು ಕೈಗೊಳ್ಳುವಾಗ ಒಟ್ಟಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಉತ್ತೇಜಿಸುವುದಾಗಿದೆ.

ಯುನೈಟೆಡ್ ಕಿಂಗ್‌ಡಮ್‌ನೊಂದಿಗೆ ದ್ವೈವಾರ್ಷಿಕವಾಗಿ ನಡೆಸಲಾಗುವ ಈ ತಾಲೀಮು ಯುಕೆ ಮತ್ತು ಭಾರತದ ನಡುವೆ ಪರ್ಯಾಯವಾಗಿ ನಡೆಯುತ್ತದೆ. ಕೊನೆಯ ಆವೃತ್ತಿಯನ್ನು ಉತ್ತರಾಖಂಡದ ಚೌಬಾಟಿಯಾದಲ್ಲಿ ಅಕ್ಟೋಬರ್ 2021 ರಲ್ಲಿ ನಡೆಸಲಾಯಿತು. ರಕ್ಷಣಾ ಸಚಿವಾಲಯದ ಪ್ರಕಾರ, ಈ ತಾಲೀಮು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಉತ್ತೇಜಿಸುತ್ತದೆ. 

ಇದನ್ನೂ ಓದಿ :ಸಮರಾಭ್ಯಾಸ ನಡೆಸಲು ಫ್ರಾನ್ಸ್‌ಗೆ ತೆರಳಲಿರುವ ಭಾರತೀಯ ವಾಯು ಸೇನೆ

ABOUT THE AUTHOR

...view details