ಕರ್ನಾಟಕ

karnataka

ಯುದ್ಧ ವಿಮಾನ ಪತನ

ETV Bharat / videos

ರಾಜಸ್ಥಾನದಲ್ಲಿ MiG-21 ಯುದ್ಧ ವಿಮಾನ ಪತನ: ಇಬ್ಬರು ಮಹಿಳೆಯರು ಸೇರಿ ಮೂವರು ಸಾವು - ರಾಜಸ್ಥಾನ ಯುದ್ಧ ವಿಮಾನ ಪತನ

By

Published : May 8, 2023, 11:35 AM IST

Updated : May 8, 2023, 12:15 PM IST

ರಾಜಸ್ಥಾನ: ಭಾರತೀಯ ವಾಯುಪಡೆಯ MiG-21 ಯುದ್ಧ ವಿಮಾನವು ರಾಜಸ್ಥಾನದ ಹನುಮಾನ್‌ಗಢ್ ಬಳಿ ಇಂದು ಬೆಳಗ್ಗೆ ಪತನಗೊಂಡಿದೆ. ಸೂರತ್‌ಗಢದಿಂದ ವಿಮಾನ ಹೊರಟಿತ್ತು. ವಿಮಾನ ಬಿದ್ದ ರಭಸಕ್ಕೆ ಇಬ್ಬರು ಮಹಿಳೆಯರು ಸೇರಿ ಮೂವರು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಪೈಲಟ್‌ ಗಾಯಗೊಂಡಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.  

ಕಳೆದ ಜನವರಿಯಲ್ಲಿ ರಾಜಸ್ಥಾನದ ಭರತ್‌ಪುರದಲ್ಲಿ ತರಬೇತಿ ವೇಳೆ ಎರಡು IAF ಫೈಟರ್ ಜೆಟ್‌ಗಳಾದ ಸುಖೋಯ್​ ಎಸ್‌ಯು - 30 ಮತ್ತು ಮಿರಾಜ್ - 2000 ಪತನಗೊಂಡಿತ್ತು. ಒಬ್ಬ ಪೈಲಟ್ ಪ್ರಾಣ ಕಳೆದುಕೊಂಡಿದ್ದರು. ಒಂದು ವಿಮಾನ ಮಧ್ಯಪ್ರದೇಶದ ಮೊರೆನಾದಲ್ಲಿ ಪತನವಾದರೆ, ಇನ್ನೊಂದು ವಿಮಾನ ರಾಜಸ್ಥಾನದ ಭರತ್‌ಪುರದಲ್ಲಿ ನೆಲಕ್ಕಪ್ಪಳಿಸಿತ್ತು.  

ಇದನ್ನೂ ಓದಿ :ಮಧ್ಯಪ್ರದೇಶದಲ್ಲಿ ಸುಖೋಯ್​-30, ಮಿರಾಜ್​-2000 ಯುದ್ಧ ವಿಮಾನಗಳು ಪತನ.. ಒಬ್ಬ ಪೈಲಟ್​ ಸಾವು

ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಸಹ ಭಾರತೀಯ ಸೇನಾ ಹೆಲಿಕಾಪ್ಟರ್ ಪತನವಾಗಿತ್ತು. ಹಾಗೆಯೇ, ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪ್ರಯೋಗದ ವೇಳೆ ಕ್ರ್ಯಾಶ್ ಲ್ಯಾಂಡಿಂಗ್ ಮಾಡಿದಾಗ ಏಪ್ರಿಲ್‌ ತಿಂಗಳಿನಲ್ಲಿ ಕೊಚ್ಚಿಯಲ್ಲಿ ಮತ್ತೊಂದು ಅಪಘಾತ ಸಂಭವಿಸಿತ್ತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ಎರಡು ಸೇನಾ ಹೆಲಿಕಾಪ್ಟರ್‌ಗಳು ಪತನಗೊಂಡಿದ್ದವು.

ಇದನ್ನೂ ಓದಿ :ಕೊಚ್ಚಿ ಏರ್​ಪೋರ್ಟ್​ನಲ್ಲಿ​ ಭಾರತೀಯ ಕೋಸ್ಟ್​​ ಗಾರ್ಡ್ ಹೆಲಿಕಾಪ್ಟರ್​ ಪತನ

Last Updated : May 8, 2023, 12:15 PM IST

ABOUT THE AUTHOR

...view details