ಕೆನಡಾದಲ್ಲಿ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ! ಖಲಿಸ್ತಾನಿಗಳ ವಿಕೃತಿ - ಮಾಜಿ ಪ್ರಧಾನಿ ಇಂದಿರಾ ಗಾಂಧಿ
ಕೆನಡಾದಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರದ ಮೆರವಣಿಗೆ ನಡೆಸುವ ಮೂಲಕ ಖಲಿಸ್ತಾನ ಪರ ಬೆಂಬಲಿಗರು ವಿಕೃತಿ ಮೆರೆದಿದ್ದಾರೆ. ಇಂದಿರಾ ಹತ್ಯೆಯನ್ನು ಸಂಭ್ರಮಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಾಕಷ್ಟು ಟೀಕೆ ಹಾಗೂ ವಿರೋಧ ವ್ಯಕ್ತವಾಗಿದೆ.
ಕೆಲವು ದಿನಗಳ ಹಿಂದೆ ಖಲಿಸ್ತಾನಿಗಳು ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ಉದ್ಧಟತನ ಪ್ರರ್ದಶಿಸಿದ್ದರು. ಇದೀಗ ಕೆನಡಾದಲ್ಲಿ ಸುಮಾರು 5 ಕಿ ಮೀ ದೂರದಷ್ಟು ಪರೇಡ್ ನಡೆಸಿದ್ದಾರೆ. ಇದರ ಭಾಗವಾಗಿ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರವನ್ನು ಕೊಂಡೊಯ್ಯಲಾಗಿದೆ. 36ನೇ ವರ್ಷದ ಅಪರೇಷನ್ ಬ್ಲ್ಯೂ ಸ್ಟಾರ್ ವರ್ಷಾಚರಣೆ ನಿಮಿತ್ತ ಜೂನ್ 4ರಂದು ಈ ಮೆರವಣಿಗೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ವಿಡಿಯೋದ ಸತ್ಯಾಸತ್ಯತೆಯನ್ನು 'ಈಟಿವಿ ಭಾರತ್' ಖಚಿತಪಡಿಸುತ್ತಿಲ್ಲ.
ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು, ''ಇಂದಿರಾ ಗಾಂಧಿಯವರು ಕಾಂಗ್ರೆಸ್ಸಿಗರಾಗಿದ್ದರೂ, ಇದನ್ನು ನೋಡಿ ನಮ್ಮ ರಕ್ತ ಕುದಿಯುತ್ತಿದೆ. ಆದರೆ, ಕೆಲವು ದಿನಗಳ ಹಿಂದೆ ಪಪ್ಪು (ರಾಹುಲ್ ಗಾಂಧಿ) ಅವರ ಭಾಷಣದಲ್ಲಿ ಕೆಲವರು ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿ ನಕ್ಕಿದ್ದರು" ಎಂದು ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ರಾಜಾ ವಾರಿಂಗ್ ಮಂಗಳವಾರ ಟ್ವೀಟ್ ಮಾಡಿ, "ಖಲಿಸ್ತಾನ ಆಗಲು ಬಿಡುವುದಿಲ್ಲ. ಖಲಿಸ್ತಾನ ಹೆಸರಿನಲ್ಲಿ ತಮ್ಮ ಅಂಗಡಿಗಳನ್ನು ನಡೆಸುವ ಮತ್ತು ಪಂಜಾಬಿಗಳ ಮಾನಹಾನಿ ಮಾಡುವ ಖಲಿಸ್ತಾನಿಗಳನ್ನು ನಿಯಂತ್ರಿಸಬೇಕು" ಎಂದು ಒತ್ತಾಯಿಸಿದ್ದರು.
ಇದನ್ನೂ ಓದಿ:ಪಂಜಾಬ್ನ ಪ್ರಾಚೀನ ದೇವಾಲಯದ ಗೋಡೆ ಮೇಲೆ 'ಖಲಿಸ್ತಾನ್ ಜಿಂದಾಬಾದ್' ಬರಹ