ಕರ್ನಾಟಕ

karnataka

ಹೋಳಿ ಹಬ್ಬ

ETV Bharat / videos

ಬಾಗಲಕೋಟೆ: ಮುಳುಗಡೆ ನಗರಿಯಲ್ಲಿ ಹೋಳಿ ರಂಗು - ETV Bharat kannada News

By

Published : Mar 10, 2023, 2:31 PM IST

ಬಾಗಲಕೋಟೆ :ಐತಿಹಾಸಿಕ ಹಿನ್ನೆಲೆ ಇರುವ ಬಾಗಲಕೋಟೆಯಲ್ಲಿ ಹೋಳಿ ಹಬ್ಬದ ರಂಗು ಕಂಡುಬಂತು. ಮೂರು ದಿನಗಳ ಕಾಲ ನಡೆದ ಬಣ್ಣದ ಆಟದಲ್ಲಿ ಯುವಕ, ಯುವತಿಯರು ಕುಣಿದು ಖುಷಿಪಟ್ಟರು. ಬಣ್ಣದಾಟದ ಸಮಯದಲ್ಲಿ ರೈನ್ ಡ್ಯಾನ್ಸ್ ಆಯೋಜಿಸಲಾಗಿತ್ತು. ಕೃತಕ ನೀರಿನ ಕಾರಂಜಿ ನಿರ್ಮಾಣ ಮಾಡಲಾಗಿತ್ತು. 

ದೇಶದಲ್ಲಿಯೇ ಅತಿ ಹೆಚ್ಚು ದಿನ ಬಣ್ಣದ ಓಕುಳಿ ಆಡುವ ನಗರ ಎಂದು ಖ್ಯಾತಿ ಪಡೆದಿರುವ ಮುಳುಗಡೆ ನಗರಿ ಮೂರು ದಿನ ಬಣ್ಣದಲ್ಲಿ ಮಿಂದೆದ್ದು ಹೋಗಿತ್ತು. ಪ್ರತಿದಿನ ಒಂದೊಂದು ಓಣಿಯವರು ಎತ್ತಿನ ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಬಣ್ಣದ ಆಟ ಆಡುವುದು ಇಲ್ಲಿನ ಸಂಪ್ರದಾಯ. ನಗರದ ಕಿಲ್ಲಾ, ಹಳೇಪೆಟೆ, ಜೈನ್ ಪೇಟೆ, ಹೊಸಪೇಟೆ ಸೇರಿದಂತೆ ಇತರ ಓಣಿಗಳಲ್ಲಿ ಮುಖಂಡರು, ಹಿರಿಯರು, ಯುವಕರು ಸೇರಿಕೊಂಡು ಬಣ್ಣದಾಟ ಆಯೋಜಿಸಿದ್ದರು.

ಪ್ರಸ್ತುತ ವಿಷಯಗಳ ಬಗ್ಗೆ ಹಾಗೂ ಪೌರಾಣಿಕ ವೇಷ ಭೂಷಣ, ರಾಮಾಯಣ, ಮಹಾಭಾರತದ ಕೆಲ ದೃಶ್ಯಗಳು, ಜ್ಞಾನಯೋಗಿ ಸಿದ್ದೇಶ್ವರ ಶ್ರೀ, ವೀರ ರಾಣಿ ಕಿತ್ತೂರ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ನಾರಿ ಶಕ್ತಿ ದೇಶ ಭಕ್ತಿ, ಭಾರತ ಮಾತೆ, ಲಕ್ಷ್ಮೀ ದೇವಿ, ಒನಕೆ ಓಬವ್ವ, ಪದ್ಮಶ್ರೀ ಸಾಲು ಮರದ ತಿಮ್ಮಕ್ಕ, ಮಹಾ ತಪ್ಪಸ್ವಿ ಭಗೀರತ ಮಹರ್ಷಿ ಸೇರಿದಂತೆ ಪ್ರಮುಖರ ವೇಷಭೂಷಣ ಧರಿಸಿ ಯುವಕರು, ಮಕ್ಕಳು ಪ್ರದರ್ಶನ ನಡೆಸಿದರು. 

ಇದನ್ನೂ ಓದಿ :ಗಂಡು ಮೆಟ್ಟಿದ ನಾಡಿನಲ್ಲಿ ಗಂಡು ಮಕ್ಕಳ ಹಬ್ಬ: ವಿಶಿಷ್ಠತೆ ಪಡೆದುಕೊಂಡ ಜಗ್ಗಲಗಿ ಸಂಭ್ರಮ

ABOUT THE AUTHOR

...view details