ಕರ್ನಾಟಕ

karnataka

ಕಳ್ಳತನ

ETV Bharat / videos

ಎಲ್ಲೆಂದರಲ್ಲಿ ಮೊಬೈಲ್​ ಬಳಸುತ್ತೀರಾ? ಈ ವಿಡಿಯೋ ನೋಡಿ ಎಚ್ಚೆತ್ತುಕೊಳ್ಳಿ - incident of mobile snatching

By

Published : Feb 5, 2023, 7:59 PM IST

Updated : Feb 6, 2023, 4:07 PM IST

ಸೂರತ್ (ಗುಜರಾತ್​): ಹಾಡಹಗಲೇ ಕಳ್ಳತನ ಮಾಡುವುದು ಈಗ ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವ ಸಲುವಾಗಿ ಸಿಸಿ ಕ್ಯಾಮರಾಗಳನ್ನು ಬಳಕೆ ಮಾಡಿದರೂ ಸಹ ಕಳ್ಳರು ಕ್ಯಾರೇ ಎನ್ನುತ್ತಿಲ್ಲ. ಗುಜರಾತ್​ನ ಸೂರತ್​ನಲ್ಲಿ ಮೊಬೈಲ್​ ಕಳ್ಳತನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರಸ್ತೆ ಬದಿಯಲ್ಲಿ ಮೊಬೈಲ್​ ಬಳಸುತ್ತ ಯುವತಿ ಒಬ್ಬರು ನಿಂತಿರುತ್ತಾರೆ. ಆಕೆಯ ಕೈಯಲ್ಲಿದ್ದ ಮೊಬೈಲ್​ನ್ನು ಕೇವಲ 5 ಸೆಕೆಂಡ್​ನಲ್ಲಿ ಕದ್ದು ಖದೀಮರು ಪರಾರಿಯಾಗುತ್ತಾರೆ. ಕಪ್ಪು ಪಲ್ಸರ್​ನಲ್ಲಿ ಬಂದ ಇಬ್ಬರು ಯುವಕರು ಸುಲಭವಾಗಿ ಕಳ್ಳತನ ಮಾಡುತ್ತಾರೆ. ಈ ವಿಡಿಯೋ ರಸ್ತೆ ಬದಿಯ ಅಂಗಡಿ ಅಥವಾ ಪೊಲೀಸರು ಅಳವಡಿಸಿದ ಸಿಸಿ ಕ್ಯಾಮರಾದ ರೀತಿ ಕಾಣುತ್ತಿದೆ. ಘಟನೆ ಸೂರತ್‌ನ ರಾಂಡರ್ ಪ್ರದೇಶದ್ದು ಎಂದು ಹೇಳಲಾಗ್ತಿದೆ. ಈ ಕುರಿತು ಪೊಲೀಸ ಏನು ಕ್ರಮ ಕೈಗೊಂಡಿದ್ದಾರೆ ಎಂಬುದರ ಮಾಹಿತಿ ತಿಳಿದುಬಂದಿಲ್ಲ. 

ಇದನ್ನೂ ಓದಿ:ಚಿನ್ನಾಭರಣ ದೋಚಲು ಯತ್ನ; ದರೋಡೆಕೋರನ ಬೆರಳು ಕಚ್ಚಿ ಕತ್ತರಿಸಿದ ಮಹಿಳೆ!

Last Updated : Feb 6, 2023, 4:07 PM IST

ABOUT THE AUTHOR

...view details