ಅಪಘಾತ: ಮೃತದೇಹ ಕಾರಿನಡಿ ಸಿಲುಕಿದರೂ 11 ಕಿಲೋಮೀಟರ್ ಚಲಾಯಿಸಿದ ಚಾಲಕ - ಕಾರಿನಡಿ ಸಿಲುಕಿದರೂ 11 ಕಿಲೋಮೀಟರ್ ಚಲಾಯಿಸಿದ ಚಾಲಕ
ಮಥುರಾ (ಉತ್ತರ ಪ್ರದೇಶ):ಅಪರಿಚಿತ ವಾಹನವೊಂದು ನಿನ್ನೆ ತಡರಾತ್ರಿ ನೋಯ್ಡಾ ಜಿಲ್ಲೆಯ ಯಮುನಾ ಎಕ್ಸ್‌ಪ್ರೆಸ್‌ವೇ ಯಲ್ಲಿ ಬೈಕ್ ಸವಾರನಿಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ನಂತರ ಡಿಕ್ಕಿ ಹೊಡೆದ ಕಾರು ಪರಾರಿಯಾಗಿದೆ. ಇತ್ತ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆ ಮಧ್ಯೆ ಭಾಗದಲ್ಲಿ ಪ್ರಜ್ಞೆ ಕಳೆದಕೊಂಡ ಸ್ಥಿತಿಯಲ್ಲಿ ಬಿದ್ದಿದ್ದಾನೆ.
ಇದಾದ ಸ್ವಲ್ಪ ಸಮಯದ ಬಳಿಕ ಇದೇ ರಸ್ತೆಯಲ್ಲಿ ಅತಿ ವೇಗದಿಂದ ಚಲಿಸಿ ಬಂದ ಮತ್ತೊಂದು ಕಾರಿನ ಕೆಳಭಾಗಕ್ಕೆ ಮೃತದೇಹ ಸಿಲುಕಿ ಸುಮಾರು 11 ಕಿಲೋಮೀ ವರೆಗೆ ಎಳೆದೊಯ್ದಿದೆ. ಚಾಲಕನ ಗಮನಕ್ಕೆ ಬಾರದೆ ಈ ಘಟನೆ ನಡೆದಿದ್ದು, ಕಾರು ಮಾತ್ ಟೋಲ್ ಪ್ಲಾಜಾದ ಬಳಿ ಬಂದಾಗ ಅಲ್ಲಿನ ಭದ್ರತಾ ಸಿಬ್ಬಂದಿಯ ಕಣ್ಣಿಗೆ ಕಾರಿನಡಿ ಸಿಲುಕಿದ್ದ ಮೃತದೇಹ ಇರುವುದು ಕಂಡು ಬಂದಿದೆ. ಈ ದೃಶ್ಯ ನೋಡಿ ಆತ ತಲ್ಲಣಗೊಂಡಿದ್ದಾರೆ.
11 ಕಿಲೋ ಮೀ ದೂರದಿಂದ ಕಾರು ಬಂದ ಕಾರಣ ಮೃತದೇಹ ಸಂಪೂರ್ಣ ಛಿದ್ರವಾಗಿ ಗುರುತು ಪತ್ತೆಯಾಗಿಲ್ಲ. ಇನ್ನೂ ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಕಾರಿನಡಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರು ಚಾಲಕನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ :ಟ್ರ್ಯಾಕ್ಟರ್ ಟ್ರೈಲರ್ಗೆ ಶಾಲೆ ಬ್ಯಾಗ್ ತಗುಲಿ ವಿದ್ಯಾರ್ಥಿ ಸಾವು