ಒಂದೇ ವೇದಿಕೆಯಲ್ಲಿ ಮೋದಿ, ರಾಜಸ್ಥಾನ ಸಿಎಂ: ಕುತೂಹಲ ಕೆರಳಿಸಿದ ಇಬ್ಬರ ಮಾತು! - ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್
ಜೈಪುರ(ರಾಜಸ್ಥಾನ): ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವೇದಿಕೆ ಹಂಚಿಕೊಂಡರು. ರಾಜಸ್ಥಾನದ ಮಂಗರ್‌ನಲ್ಲಿ ಬ್ರಿಟಿಷ್ ಸೇನೆಯಿಂದ ಹತ್ಯೆಗೀಡಾದ ಆದಿವಾಸಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಉಭಯ ನಾಯಕರು ತಮ್ಮ ಅನುಭವಗಳನ್ನು ವಿನಿಮಯ ಮಾಡಿಕೊಂಡರು. "ಅಶೋಕ್ ಜೀ ಮತ್ತು ನಾನು ಮುಖ್ಯಮಂತ್ರಿಗಳಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ನಮ್ಮಲ್ಲಿ ಅತ್ಯಂತ ಹಿರಿಯರು" ಎಂದು ಪ್ರಧಾನಿ ಮೋದಿ ಹೇಳಿದರು. ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಗೆಹ್ಲೋಟ್, "ಪ್ರಧಾನಿ ನರೇಂದ್ರ ಮೋದಿ ವಿದೇಶಕ್ಕೆ ಹೋದಾಗ ಅವರಿಗೆ ವಿಶೇಷ ಗೌರವ ಸಿಗುತ್ತದೆ. ಏಕೆಂದರೆ ಅವರು ಗಾಂಧಿ ರಾಷ್ಟ್ರದ ಪ್ರಧಾನಿಯಾಗಿದ್ದಾರೆ. ಇಲ್ಲಿ ಪ್ರಜಾಪ್ರಭುತ್ವ ಆಳವಾಗಿ ಬೇರೂರಿದೆ. 70 ವರ್ಷಗಳ ನಂತರವೂ ಪ್ರಜಾಪ್ರಭುತ್ವ ಜೀವಂತವಾಗಿದೆ. ಜನರು ಇದನ್ನು ತಿಳಿದಿದ್ದಾರೆ ಮತ್ತು ಗೌರವವನ್ನು ನೀಡುತ್ತಾರೆ" ಎಂದು ಶ್ಲಾಘಿಸಿದರು.
Last Updated : Feb 3, 2023, 8:31 PM IST