ಕೇರಳದಲ್ಲಿ ಫುಟ್ಬಾಲ್ ಫೀವರ್.. ಅಭಿಮಾನಿಗಳ ಮಧ್ಯೆ ಮೆಸ್ಸಿ ನೇಮರ್ ಕಟೌಟ್ ವಾರ್ - ಕೇರಳದಲ್ಲಿ ಫುಟ್ಬಾಲ್ ಫೀವರ್
ಕೋಝಿಕ್ಕೋಡ್ (ಕೇರಳ): ದೇಶದಲ್ಲಿ ಕ್ರಿಕೆಟ್ಗೆ ಹೆಚ್ಚಿನ ಮನ್ನಣೆ ಇದ್ದರೂ, ಕೇರಳದಲ್ಲಿ ಫುಟ್ಬಾಲ್ ಕ್ರೇಜ್ಗೇನೂ ಕಮ್ಮಿಯಿಲ್ಲ. ಇದಕ್ಕೆ ಸಾಕ್ಷಿಯಾಗಿ ಫುಟ್ಬಾಲ್ ಲೆಜೆಂಡ್ಗಳಾದ ಲಿಯೋನಲ್ ಮೆಸ್ಸಿ ಮತ್ತು ನೇಮರ್ ಅವರ ಕಟೌಟ್ನ್ನು ಕೇರಳದ ಕೋಝಿಕ್ಕೋಡ್ನ ನದಿ ಮಧ್ಯದಲ್ಲಿ ಸ್ಥಾಪಿಸಲಾಗಿದೆ. ಅರ್ಜೆಂಟೀನಾ ಫುಟ್ಬಾಲ್ ತಂಡದ ಕೇರಳ ಅಭಿಮಾನಿಗಳು ಲಿಯೋನೆಲ್ ಮೆಸ್ಸಿಯ 30 ಅಡಿ ಕಟೌಟ್ನ್ನು ನಿಲ್ಲಿಸಿದರೆ, ಇದಕ್ಕೆ ಪ್ರತಿಯಾಗಿ ಬ್ರೆಜಿಲ್ ಅಭಿಮಾನಿಗಳು ನೇಮರ್ ಜೂನಿಯರ್ ಕಟೌಟನ್ನು 35 ಅಡಿ ಎತ್ತರದಲ್ಲಿ ನಿಲ್ಲಿಸಿದ್ದಾರೆ. ಫಿಫಾ ಫುಟ್ಬಾಲ್ ವಿಶ್ವಕಪ್ಗೆ ಕ್ಷಣಗಣನೆ ಆರಂಭದ ಹೊತ್ತಲ್ಲೇ, ಇವೆರಡೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ.
Last Updated : Feb 3, 2023, 8:31 PM IST