ODI World Cup 2023: ಈಡನ್ ಗಾರ್ಡನ್ಸ್ ಸ್ಟೇಡಿಯಂಗೆ ಐಸಿಸಿ ತಂಡ ಭೇಟಿ, ಪರಿಶೀಲನೆ - ಈಡನ್ ಗಾರ್ಡನ್ ಕ್ರೀಡಾಂಗಣ
ಕೋಲ್ಕತ್ತಾ (ಪಶ್ಚಿಮಬಂಗಾಳ) :ಈ ವರ್ಷಾಂತ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾಟಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ (ಐಸಿಸಿ) ಆರು ಸದಸ್ಯರ ತಂಡ ಇಂದು ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಿದ್ಧತೆ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಸಂಗ್ರಹಿಸಿದ ತಂಡ ಸಲಹೆ, ಸೂಚನೆಗಳನ್ನು ನೀಡಿದೆ.
ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ನೇಹ ಶಿಶ್ ಮಾತನಾಡಿ, "ಐಸಿಸಿ ತಂಡ ಇಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ತೃಪ್ತವಾಗಿದೆ. ಕೆಲವು ಸಲಹೆಗಳನ್ನು ನೀಡಿದ್ದಾರೆ. ಆ ರೀತಿಯಲ್ಲಿ ಕೆಲಸಗಳನ್ನು ನಡೆಸಲಾಗುವುದು. ಕ್ರೀಡಾಂಗಣದ ಕ್ಲಬ್ ಹೌಸ್, ಲಾಬಿ, ಕಾನ್ಫರೆನ್ಸ್ ಹಾಲ್, ಬಿಸಿಕೆಎಲ್ ಕಾರ್ಪೊರೇಟ್ ಬಾಕ್ಸ್ಗಳ ನವೀಕರಣ ನಡೆಯುತ್ತಿದೆ" ಎಂದರು.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ 5 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ನೆದರ್ಲೆಂಡ್- ಬಾಂಗ್ಲಾದೇಶ ತಂಡಗಳ ನಡುವೆ ಅಕ್ಟೋಬರ್ 28ರಂದು ನಿಗದಿಯಾಗಿದೆ. ಅ.31ರಂದು ಪಾಕಿಸ್ತಾನ ಮತ್ತು ಬಾಂಗ್ಲಾ, ನವೆಂಬರ್ 5ರಂದು ಭಾರತ- ದಕ್ಷಿಣ ಆಫ್ರಿಕಾ, ನ.12ರಂದು ಇಂಗ್ಲೆಂಡ್- ಪಾಕಿಸ್ತಾನ ನಡುವೆ ಪಂದ್ಯಾಟವಿದೆ. ಎರಡನೇ ಸೆಮಿಫೈನಲ್ ಪಂದ್ಯ ನ.16ರಂದು ನಡೆಯಲಿದೆ.
ಇದನ್ನೂ ಓದಿ :ಹೊಸಕೋಟೆ: ಬೈಕ್ಗಳಿಗೆ ಡಿಕ್ಕಿ ಹೊಡೆದು ಮರಕ್ಕೆ ಗುದ್ದಿದ ಕಾರು.. ಸಿಸಿಟಿವಿ ವಿಡಿಯೋ