'ನಾನೀಗ ನಿವೃತ್ತಿ ಹೊಂದಬಹುದೆಂದು ಅನಿಸುತ್ತಿದೆ': ಚುನಾವಣೆಗೂ ಮುನ್ನ ಮಾಜಿ ಸಿಎಂ ವಸುಂಧರಾ ರಾಜೆ ನಿವೃತ್ತಿ ಹೇಳಿಕೆ - Rajasthan Assembly Election 2023
Published : Nov 4, 2023, 4:35 PM IST
ಜಲಾವರ್, ರಾಜಸ್ಥಾನ: ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಅಭ್ಯರ್ಥಿ ವಸುಂಧರಾ ರಾಜೆ ಆ ಹೇಳಿಕೆ ಬಗ್ಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ನವೆಂಬರ್ 25 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಶನಿವಾರದಂದು ಜಲಾವರ್ ವಿಧಾನಸಭಾ ಕ್ಷೇತ್ರದಿಂದ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಜಲಾವರ್ ನನ್ನ ಕುಟುಂಬ. ಈ ಕುಟುಂಬದಲ್ಲಿ ನಾವು ರಾಜಕೀಯ ಅರ್ಥವಿಲ್ಲದ ಬಹಳಷ್ಟು ವಿಷಯಗಳನ್ನು ಮಾತನಾಡುತ್ತೇವೆ. ನನ್ನ ಪುತ್ರ ದುಶ್ಯಂತ್ ನೀಡಿದ ಹೇಳಿಕೆ ಉದ್ದೇಶಿಸಿ ನಾನು ಮಾತನಾಡಿದ್ದೇನೆ. ''ಮುಜೆ ಲಗ್ ರಹಾ ಹೈ ಕೆ ಅಬ್ ಮೇ ನಿವೃತ್ತಿ ಹೋ ಜಾ ಶಕ್ತಿ ಹೂಂ'' (ನಾನು ಈಗ ನಿವೃತ್ತಿ ಹೊಂದಬಹುದು ಎಂದು ನಾನು ಭಾವಿಸುತ್ತೇನೆ). ತನ್ನ ಪುತ್ರ ಹಾಗೂ ಸಂಸದ ದುಶ್ಯಂತ್ ಸಿಂಗ್ನನ್ನು ನೀವು ಚೆನ್ನಾಗಿ ಬೆಳೆಸಿದ್ದೀರಿ. ಕುಚ್ ಪ್ಯಾರ್ ಸೇ, ಕುಚ್ ಆಂಖ್ ದಿಖಾ ಕೆ (ಕೆಲವೊಮ್ಮೆ ಪ್ರೀತಿಯಿಂದ, ಮತ್ತೆ ಕೆಲವು ಸಲ ಉಪದೇಶದೊಂದಿಗೆ..) ನೀವು ಅವರನ್ನು ಉತ್ತಮ ಹಾದಿಯಲ್ಲಿ ಇಟ್ಟಿದ್ದೀರಿ. ಅದಕ್ಕೆ ಅಭಿನಂದನೆ'' ಎಂದಿದ್ದಾರೆ
ದುಶ್ಯಂತ್ ನಿನ್ನೆ ಆಡಿದ ಮಾತು ಕಂಡು ತಾನು ಹಾಗೆ ಹೇಳಿದೆ. ಪುತ್ರನ ಮಾತು ಕೇಳಿ, ಅಲ್ಲಿ ಸೇರಿದ್ದ ಜನರ ಪ್ರೀತಿ ನೋಡಿ ಖುಷಿಪಟ್ಟೆ. ಒಬ್ಬ ತಾಯಿಯಾಗಿ ಇಬ್ಬರ ನಡುವೆ ಇಷ್ಟು ಸಮನ್ವಯತೆ ಇದ್ದದ್ದು ನನಗೆ ಖುಷಿ ತಂದಿತು. ಹಾಗಾಗಿ ಭವಿಷ್ಯದಲ್ಲಿ ಈ ರಾಜಕೀಯ ಜವಾಬ್ದಾರಿಯನ್ನು ಪುತ್ರ ಹೊರಲಿದ್ದಾರೆ ಎಂಬ ನಿರ್ಧಾರಿಂದ ನಾನು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದೆ. ಆದರೆ, ಕ್ಷೇತ್ರದ ಜನರ ಪ್ರೀತಿ ಬಿಡುತ್ತಿಲ್ಲ. ನಾನು ಈಗಷ್ಟೇ ನಾಮಪತ್ರ ಸಲ್ಲಿಸಿದ್ದೇನೆ. ನಿವೃತ್ತಿಯ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳಬೇಡಿ. ಇದು ನಮ್ಮ ಕುಟುಂಬ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮನ್ನು ಇಲ್ಲಿಗೆ ಕರೆತಂದಿದೆ. ಮುಂದಿನ ದಾರಿ ಕೂಡ ಅವರ ಕೈಯಲ್ಲಿದೆ'' ಎಂದು ಮಾರ್ಮಿಕವಾಗಿ ಹೇಳಿದರು.
ಇದನ್ನೂ ಓದಿ:'ಶ್ರೀಕೃಷ್ಣ ಆಶೀರ್ವಾದ ಮಾಡಿದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ' : ಕಂಗನಾ ರಣಾವತ್