ಕರ್ನಾಟಕ

karnataka

ಡಿಸಿಎಂ ಡಿ ಕೆ ಶಿವಕುಮಾರ್​

ETV Bharat / videos

ಎಲ್ಲ ರಾಜ್ಯಗಳಲ್ಲಿ ನಾವೇ ಸರ್ಕಾರ ರಚಿಸುತ್ತೇವೆ ಎನ್ನುವ ವಿಶ್ವಾಸವಿದೆ: ಡಿ ಕೆ ಶಿವಕುಮಾರ್​ - ಐಟಿ ಪಾರ್ಕ್​

By ETV Bharat Karnataka Team

Published : Nov 27, 2023, 4:55 PM IST

ನವದೆಹಲಿ : "ರಾಜಸ್ಥಾನ ಸೇರಿದಂತೆ ಚುನಾವಣೆ ನಡೆಯಲಿರುವ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್​ ಪಕ್ಷ ಯಾವುದೇ ಸಮಸ್ಯೆಗಳಿಲ್ಲದೇ ಆರಾಮಾಗಿ ಗೆಲುವು ಸಾಧಿಸಿ, ನಾವೇ ಸರ್ಕಾರ ರಚಿಸುತ್ತೇವೆ ಎನ್ನುವ ವಿಶ್ವಾಸ ನನಗಿದೆ" ಎಂದ ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಪಂಚ ರಾಜ್ಯಗಳ ಚುನಾವಣೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ತೆಲಂಗಾಣ ಸಿಎಂ ಕೆಸಿಆರ್​, ಮುಸ್ಲಿಮರಿಗೆ ಐಟಿ ಪಾರ್ಕ್​ ತೆರೆಯುವುದಾಗಿ ಘೋಷಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, "ಅದು ಹೇಗೆ ಸಾಧ್ಯ? ನೀವು ಅಲ್ಪಸಂಖ್ಯಾತರಿಗೆ ಐಟಿ ಪಾರ್ಕ್​ ಹೇಗೆ ಮಾಡಲು ಸಾಧ್ಯ? ನಾನು ಈ ರೀತಿಯ ನೀತಿಯ ಬಗ್ಗೆ ಇಡೀ ದೇಶದಲ್ಲಿ ಎಲ್ಲೂ ಕೇಳಿಲ್ಲ. ನೀವು ಯುವಕರಿಗಾಗಿ ಅಥವಾ ಮಹಿಳೆಯರಿಗಾಗಿ ಮಾಡಬಹುದು. ಆದರೆ, ಈ ರೀತಿ ಜಾತಿ, ಧರ್ಮದ ಆಧಾರದಲ್ಲಿ ಬೇರೆ ಮಾಡಿ ಮಾಡುವಂತಿಲ್ಲ. ಇದು, ಅವರನ್ನು ಅವರೇ ದುರ್ಬಲಗೊಳಿಸಿರುವುದನ್ನು ತೋರಿಸುತ್ತದೆ. ಯುವಕರು, ಮಕ್ಕಳು, ಮಹಿಳೆಯರು ಇದರಲ್ಲಿ ಯಾವುದೇ ಜಾತಿಯ ಬೇಧ ಇಲ್ಲ. ನೀವು ಅಲ್ಪಸಂಖ್ಯಾತರ ಬಗ್ಗೆ, ಪರಿಶಿಷ್ಟ ಜಾತಿಯ ಬಗ್ಗೆ ಪ್ರಚಾರ ಮಾಡಬಹುದು. ಆದರೆ ನೀವು ಅವರಿಗಾಗಿ ಐಟಿ ಪಾರ್ಕ್​ ನಿರ್ಮಿಸಲು ಸಾಧ್ಯವಿಲ್ಲ" ಎಂದು ಹೇಳಿದರು.

ಇದನ್ನೂ ಓದಿ:ಕರ್ನಾಟಕ ಚುನಾವಣಾ ಫಲಿತಾಂಶವೇ ತೆಲಂಗಾಣದಲ್ಲೂ ಬರಲಿದೆ: ಹೈದರಾಬಾದ್​ನಲ್ಲಿ ಡಿಕೆಶಿ ವಿಶ್ವಾಸ

ABOUT THE AUTHOR

...view details