ಹಿಮಾಚಲದಲ್ಲಿ ಮಳೆಯಿಂದ ರಸ್ತೆ ಹಾನಿ: 5 ಕಿಮೀ ಟ್ರಾಫಿಕ್ ಜಾಮ್ - ವಿಡಿಯೋ - Hundreds of vehicles were stuck
Published : Aug 24, 2023, 10:36 AM IST
ಶಿಮ್ಲಾ( ಹಿಮಾಚಲ ಪ್ರದೇಶ):ರಾಜ್ಯದಲ್ಲಿ ನಿರಂತರ ಮಳೆಯಿಂದ ಕುಲು - ಮಂಡಿ ರಸ್ತೆ ಹಾನಿಗೊಳಾಗಿದ್ದು, ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳೆಲ್ಲ ಟ್ರಾಫಿಕ್ಸ್ನಲ್ಲಿ ಸಿಲುಕಿ ಸಂಕಷ್ಟಕ್ಕೆ ಒಳಗಾಗಿವೆ. 'ಇಲ್ಲಿನ ಟ್ರಾಫಿಕ್ನಲ್ಲಿ ಸಿಲುಕಿ ಹಾಕಿಕೊಂಡಿರುವ ವಾಹನ ಸವಾರರು ನಮಗೆ ತಿನ್ನಲು ಅಥವಾ ಕುಡಿಯಲು ಕೂಡ ಏನು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಸುಮಾರು 5 ರಿಂದ 10 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ತಕ್ಷಣವೇ ರಸ್ತೆಯನ್ನ ತೆರವುಗೊಳಿಸಿ ನಮ್ಮ ನೆರವಿಗೆ ಬರಬೇಕು ಎಂದು ಅವರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಮಳೆಯಿಂದ ಕುಲು ಜಿಲ್ಲೆಗೆ ಸಂಪರ್ಕಿಸುವ 2 ರಸ್ತೆಗಳು ಹಾಳಾಗಿದೆ. ಪಾಂಡೋ ಮೂಲಕವಿದ್ದ ಪರ್ಯಾಯ ಮಾರ್ಗವು ದುರಸ್ತಿಯಲ್ಲಿದ. ಇನ್ನು ರಸ್ತೆಯನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ಪ್ರಯತ್ನಿಸುತ್ತಿದೆ ಎಂದು ಕುಲು ಜಿಲ್ಲಾ ಎಸ್ಪಿ ಸಾಕ್ಷಿ ವರ್ಮಾ ಹೇಳಿದ್ದಾರೆ.
ಇನ್ನು ಮಳೆಗಾಲದ ಆರಂಭದಲ್ಲೇ ಒಟ್ಟು 2,022 ಮನೆಗಳು ರಾಜ್ಯದಲ್ಲಿ ಸಂಪೂರ್ಣವಾಗಿ ಹಾನಿಗೊಳಗಾಗಿವೆ ಮತ್ತು 9,615 ಮನೆಗಳು ಭಾಗಶಃ ನಾಶವಾಗಿವೆ. 113 ಕಡೆ ಭೂಕುಸಿತಗಳು ಸಂಭವಿಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಜೂನ್ 24ರ ನಂತರ ಹಿಮಾಚಲದಲ್ಲಿ ಒಟ್ಟು 8014.61 ಕೋಟಿ ರೂ. ನಷ್ಟ ಉಂಟಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಸಾವಿರಾರು ಪ್ರವಾಸಿಗರು ಮತ್ತು ಸ್ಥಳೀಯ ಜನರನ್ನು ಭಾರತೀಯ ವಾಯುಪಡೆ, ಸೇನೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್, ಪೊಲೀಸ್, ಗೃಹ ರಕ್ಷಕರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಸ್ವಯಂಸೇವಕರ ಸಹಾಯದಿಂದ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ:ಶಿಮ್ಲಾದ ಶಿವ ಮಂದಿರ ದುರಂತ: ಅವಶೇಷಗಳಡಿ ಇದುವರೆಗೂ 17 ಮೃತದೇಹಗಳು ಪತ್ತೆ