ಕರ್ನಾಟಕ

karnataka

ಅಕಾಲಿಕ ಗಾಳಿ ಮಳೆಗೆ ರೈತರ ನೂರಾರು ಎಕರೆ ಬೆಳೆ ನಾಶ

ETV Bharat / videos

ಅಕಾಲಿಕ ಗಾಳಿ ಮಳೆಗೆ ರೈತರ ನೂರಾರು ಎಕರೆ ಬೆಳೆ ನಾಶ: ಪರಿಹಾರದ ನಿರೀಕ್ಷೆಯಲ್ಲಿ ಅನ್ನದಾತರು - ಬೆಳೆ ವರುಣನ ಅಬ್ಬರಕ್ಕೆ ಹಾನಿ

By

Published : Mar 20, 2023, 6:07 PM IST

ಕಲಬುರಗಿ:ಉತ್ತಮ ಫಸಲು ನೀರಿಕ್ಷೆಯಲ್ಲಿದ್ದ ಬಿಸಿಲೂರು ಕಲಬುರಗಿ ಜಿಲ್ಲೆಯ ರೈತರಿಗೆ ವರುಣ ಬರೆ ಎಳೆದಿದ್ದಾನೆ. ಕಳೆದೆರಡು ದಿನ ಅಬ್ಬರಿಸಿದ ಅಕಾಲಿಕ ಗಾಳಿ ಸಹಿತ ಆಲಿಕಲ್ಲು ಮಳೆಗೆ ಅನ್ನದಾತರು ಬೆಳೆದ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಅಕ್ಷರಶಃ ಅನ್ನದಾತರು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಜಿಲ್ಲೆಯ ರೈತರು ಬೆಳೆದ ಪಪ್ಪಾಯಿ, ನುಗ್ಗೆ, ದ್ರಾಕ್ಷಿ, ಕಲ್ಲಂಗಡಿ, ಗೋಧಿ, ಜೋಳ ಬೆಳೆ ವರುಣನ ಅಬ್ಬರಕ್ಕೆ ಹಾನಿಯಾಗಿದೆ. 

ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನಹಿಪ್ಪರಗಾ ಗ್ರಾಮದ ಸುತ್ತಮುತ್ತ ಫಸಲು ಕಟ್ಟಿದ್ದ ಬೆಳೆ ನಾಶವಾಗಿದ್ದು, ನೂರಾರು ರೈತರು ಕಂಗಾಲಾಗಿದ್ದಾರೆ. ರೈತ ಸಿದ್ರಾಮ ಬಕ್ರೆ ಅವರ 2 ಎಕರೆ ಪಪ್ಪಾಯ, ಮಲ್ಲಿನಾಥ್ ಯಳಮೇಲಿ ಅವರ 4.5 ಎಕರೆ ಪಪ್ಪಾಯ, ಪರಮೇಶ್ವರ ನಿಂಗದಳ್ಳಿ ಬೆಳೆದ 3 ಎಕರೆ ಪಪ್ಪಾಯ, 4 ಎಕರೆ ದ್ರಾಕ್ಷಿ, ರೈತ ಮಲ್ಲಿನಾಥ್ ಮೂಲಗೆ ಅವರ 2 ಎಕರೆ ದ್ರಾಕ್ಷಿ ಬೆಳೆ, ವಿಜಯಕುಮಾರ್ ಏಲಿಕೇರಿ ಅವರ 4 ಎಕರೆ ನುಗ್ಗೆ, ರೈತ ಶ್ರೀಶೈಲ ಕೋಳಶೆಟ್ಟಿ ಅವರ 3 ಎಕರೆ ನುಗ್ಗೆ, 5 ಎಕರೆ ಜೋಳ ಮತ್ತು 3 ಎಕರೆ ಗೋಧಿ, ಅಲ್ಲಪೂರ್ ಗ್ರಾಮದಲ್ಲಿ ರೈತ ಶರಣಗೌಡ ಅವರ 3.5 ಎಕರೆ ಕಲ್ಲಂಗಡಿ ಹೀಗೆ ಅನೇಕ ರೈತರು ಬೆಳೆದ ಬೆಳೆಗಳು ವರುಣನಾರ್ಭಟಕ್ಕೆ ನೆಲಕಚ್ಚಿವೆ. 

ಸಾಲ ಮಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಲಕ್ಷಾಂತರ ಮೌಲ್ಯದ ಬೆಳೆ ಕೈಗೆ ಬರೋ ಹೊತ್ತಿಗೆ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಒಂದೆಡೆ ಬೆಳೆ ಹಾನಿಯಾಗಿದ್ರೆ, ಮತ್ತೊಂದೆಡೆ ಮಾಡಿರೋ ಸಾಲ ತಿರಿಸೋದು ಹೇಗೆ ಅನ್ನೋ ಚಿಂತೆಯಲ್ಲಿ ಮುಳುಗುವಂತಾಗಿದೆ. ಸದ್ಯ ದಿಕ್ಕು ಕಾಣದೆ ಬೆಳೆ ಹಾನಿಗೆ ಸೂಕ್ತ ಪರಿಹಾರಕ್ಕಾಗಿ ಅನ್ನದಾತರು ಮನವಿ ಮಾಡಿದ್ದಾರೆ. ಚುನಾವಣೆ ಕಾವಿನಲ್ಲಿನಲ್ಲಿರುವ ಸರ್ಕಾರ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. 

ಇದನ್ನೂ ಓದಿ:ಬೀದರ್​ನಲ್ಲಿ ಆಲಿಕಲ್ಲು ಸಹಿತ ಸುರಿದ ಔಖಲಿ ಮಳೆ.. ಜನಜೀವನ ಅಸ್ತವ್ಯಸ್ತ

ABOUT THE AUTHOR

...view details