ಕರ್ನಾಟಕ

karnataka

ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ

ETV Bharat / videos

Male Mahadeshwara Temple: 21 ದಿನದಲ್ಲಿ ಮಲೆಮಾದಪ್ಪನ ಹುಂಡಿಯಲ್ಲಿ ಒಂದೂವರೆ ಕೋಟಿ ರೂಪಾಯಿ ಹಣ! ವಿಡಿಯೋ

By

Published : Jul 28, 2023, 9:26 AM IST

ಚಾಮರಾಜನಗರ:ನಾಡಿನಪ್ರಸಿದ್ಧ ಯಾತ್ರಾಸ್ಥಳ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು. ದೇವಾಲಯದಲ್ಲಿ ಕೇವಲ 21 ದಿನಗಳ ಅವಧಿಯಲ್ಲಿ 1,56,38,122 ರೂ. ಹಣ ಸಂಗ್ರಹವಾಗಿದೆ. ಕಾಣಿಕೆ ರೂಪದಲ್ಲಿ ದೇವರಿಗೆ 30 ಗ್ರಾಂ ಚಿನ್ನ ಹಾಗೂ 1.26 ಕೆಜಿ ಬೆಳ್ಳಿ ಆಭರಣಗಳನ್ನು ಭಕ್ತರು ಹುಂಡಿಗೆ ಅರ್ಪಿಸಿದ್ದಾರೆ. 

ಉಚಿತ ಬಸ್ ಪ್ರಯಾಣದ ಹಿನ್ನೆಲೆಯಲ್ಲಿ ಹುಣ್ಣಿಮೆ, ಭೀಮನ ಅಮಾವಾಸ್ಯೆ ಹಾಗೂ ಸರ್ಕಾರಿ ರಜಾ ದಿನಗಳಂದು ಮಾದಪ್ಪನ ಸನ್ನಿಧಿಗೆ ಮಹಿಳಾ ಸಾಗರವೇ ಹರಿದು ಬಂದಿದ್ದು, ಶ್ರೀಕ್ಷೇತ್ರಕ್ಕೆ ಭರ್ಜರಿ ಆದಾಯ ಬಂದಿದೆ.

ಜುಲೈ 7ರ ಎಣಿಕೆಯಲ್ಲಿ ₹2.47 ಕೋಟಿ ಸಂಗ್ರಹ: ಗುರುವಾರ ನಡೆದ ಮಲೆ ಮಾದಪ್ಪನ ಹುಂಡಿ ಎಣಿಕೆಗೂ ಮುನ್ನ 21 ದಿನಗಳ ಹಿಂದೆ ಅಂದರೆ ಜುಲೈ 7ರಂದು ಕೂಡಾ ಎಣಿಕೆ ಕಾರ್ಯ ನಡೆದಿತ್ತು. ಅಂದು ಕೇವಲ 36 ದಿನಗಳಲ್ಲಿ 2 ಕೋಟಿಗೂ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗಿತ್ತು. ನಿಷೇಧಕ್ಕೊಳಗಾಗಿ ವಿನಿಮಯಕ್ಕೆ ಅವಕಾಶವಿರುವ 2 ಸಾವಿರ ರೂ‌. ಮುಖಬೆಲೆಯ 37 ನೋಟುಗಳು, 77 ಗ್ರಾಂ ಚಿನ್ನ, 2.250 ಗ್ರಾಂ ಬೆಳ್ಳಿ ಹುಂಡಿಯಲ್ಲಿ ದೊರತಿತ್ತು.

ಇದನ್ನೂ ಓದಿ:ಯಲಗೂರು ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಆರಂಭ: ನೇಪಾಳದ ಕರೆನ್ಸಿ ನೋಟು, ಭಕ್ತರಿಂದ ತರಹೇವಾರಿ ಬೇಡಿಕೆ ಪತ್ರಗಳು ಪತ್ತೆ 

ABOUT THE AUTHOR

...view details